ಮೀಸಲಾತಿ ರದ್ದುಗೊಳಿಸುವ ಪ್ರಶ್ನೆಯೇ ಇಲ್ಲ: ಪ್ರಧಾನಿ ಮೋದಿ

ಮಂಗಳವಾರ, 2 ಫೆಬ್ರವರಿ 2016 (21:48 IST)
ದೇಶದ ಏಕತೆಯನ್ನು ಇಬ್ಬಾಗಿಸಲು ಉದ್ದೇಶಪೂರ್ವಕವಾಗಿ ಸರಕಾರ ಮೀಸಲಾತಿ ಅಂತ್ಯಗೊಳಿಸಲಿದೆ ಎನ್ನುವ ಸುಳ್ಳು ವರದಿಯನ್ನು ಕಾಂಗ್ರೆಸ್ ಮುಖಂಡರು ಹರಡಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.
 
ಕಾಂಗ್ರೆಸ್ ಮುಖಂಡರು ಹೋದ ಕಡೆಗಳಲ್ಲೆಲ್ಲಾ ದಲಿತರ ಹೆಸರಲ್ಲಿ ಸುಳ್ಳು ಮಾಹಿತಿಯನ್ನು ಬಿತ್ತರಿಸುತ್ತಿದ್ದಾರೆ. ದಲಿತರನ್ನು ಮೂರ್ಖರನ್ನಾಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. 
 
ಪರಸ್ಪರರು ಹೊಡೆದಾಟದಲ್ಲ ತೊಡಗಿ ದೇಶದ ಏಕತೆಯನ್ನು ಹಾಳುಗೆಡುವಲು ಉದ್ದೇಶಪೂರ್ವಕಾಗಿ ಮೀಸಲಾತಿಯ ಸಂಚು ನಡೆಸಲಾಗುತ್ತಿದೆ. ಯಾಕೆಂದರೆ ಅವರಿಂದ ಅಧಿಕಾರ ಕಿತ್ತುಕೊಂಡಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಪಕ್ಷ ಸದಾ ದಲಿತರು ತಮ್ಮ ವೋಟ್ ಬ್ಯಾಂಕ್ ಎಂದು ಭಾವಿಸಿತ್ತು. ಇದೀಗ ಮೋದಿ ದಲಿತರ ಪರವಾಗಿ ಕಾರ್ಯನಿರ್ವಹಿಸುವುದು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದರು.
 
ಹೈದ್ರಾಬಾದ್‌ನಲ್ಲಿ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿರುವುದರಿಂದ ಅವರನ್ನು ಮೋದಿ ಟಾರ್ಗೆಟ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಕಳೆದ ಶನಿವಾರದಂದು ರಾಹುಲ್ ಗಾಂಧಿ, ಮೋದಿ ಮತ್ತು ಆರೆಸ್ಸೆಸ್ ತಮ್ಮ ಸಿದ್ಧಾಂತಗಳನ್ನು ವಿದ್ಯಾರ್ಥಿಗಳ ಮೇಲೆ ಒತ್ತಾಯಪೂರ್ವಕವಾಗಿ ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ವೆಬ್ದುನಿಯಾವನ್ನು ಓದಿ