ಸ್ಕರ್ಟ್ ವಿವಾದವಿಲ್ಲ: ನನಗೂ ಕೂಡ ಹೆಣ್ಣುಮಕ್ಕಳಿದ್ದಾರೆ, ಮಹೇಶ್ ಶರ್ಮಾ ಸ್ಪಷ್ಟನೆ

ಮಂಗಳವಾರ, 30 ಆಗಸ್ಟ್ 2016 (13:27 IST)
ಮಹಿಳಾ ಪ್ರವಾಸಿಗಳು ಭಾರತದಲ್ಲಿ ಸ್ಕರ್ಟ್ ಧರಿಸಬಾರದೆಂದು ಸಲಹೆ ಮಾಡಿದ್ದ ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಟೀಕೆಗೆ ಗುರಿಯಾದ ಬಳಿಕ ಉಲ್ಟಾ ಹೊಡೆದಿದ್ದಾರೆ. ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿ ತಾವು ಧಾರ್ಮಿಕ ಸ್ಥಳಗಳನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದಾಗಿ ತಿಳಿಸಿದರು.
 
ನಾನು ಕೂಡ ಇಬ್ಬರು ಹೆಣ್ಣುಮಕ್ಕಳ ತಂದೆ. ಮಹಿಳೆಯರಿಗೆ ಯಾವ ಉಡುಪು ಧರಿಸಬೇಕು,ಯಾವುದನ್ನು ಧರಿಸಬಾರದೆಂದು ನಾನು ಹೇಳುವುದಿಲ್ಲ. ಆದರೆ ಅವರು ದೇವಾಲಯದೊಳಗೆ ಪ್ರವೇಶಿಸುವಾಗ  ಶೂಗಳನ್ನು ತೆಗೆದಿರಿಸಿ, ಗುರುದ್ವಾರ ಪ್ರವೇಶಿಸುವಾಗ ಅವರ ತಲೆಯನ್ನು ಮುಚ್ಚಿಕೊಳ್ಳಬೇಕು ಎಂದು ಮಾತ್ರ ಹೇಳಿದ್ದಾಗಿ ಮಹೇಶ್ ಶರ್ಮಾ ಮಾಧ್ಯಮಕ್ಕೆ ಸ್ಪಷ್ಟಪಡಿಸಿದರು.
 
ಭಾರತ ವೈವಿಧ್ಯಮಯ ಸಂಸ್ಕೃತಿಗೆ ಹೆಸರಾಗಿದ್ದು, ಇಂತಹ ನಿಷೇಧ ವಿಧಿಸುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದರು.
ಜನರು ರಾತ್ರಿಯಲ್ಲಿ ಒಂಟಿಯಾಗಿ ಅಲೆಯುತ್ತಾರೆಂಬ ತಮ್ಮ ಆರೋಪವನ್ನು ಅವರು ನಿರಾಕರಿಸಿದರು. ಪ್ರವಾಸಿಗಳಿಗೆ ಎಚ್ಚರವಾಗಿರುವಂತೆ ಮಾತ್ರ ತಿಳಿಸಲಾಗಿದ್ದು, ಹಾಗೆ ಎಚ್ಚರಿಸುವುದರಲ್ಲಿ ಯಾವುದೇ ತಪ್ಪು ಇಲ್ಲ ಎಂದರು. 
 
ಕೇಂದ್ರ ಸಚಿವರು ನಿನ್ನೆ ಭಾರತಕ್ಕೆ ಭೇಟಿ ನೀಡುವ ಪ್ರವಾಸಿಗಳಿಗೆ ಸ್ವಾಗತ ಕಿಟ್ ನೀಡಲಾಗುತ್ತದೆ. ರಾತ್ರಿಯಲ್ಲಿ ಒಂಟಿಯಾಗಿ ಅಲೆಯದಂತೆ, ಸ್ಕರ್ಟ್ ಧರಿಸದಂತೆ ಅದರಲ್ಲಿ ಮಹಿಳೆಯರಿಗೆ ಸಲಹೆ ಮಾಡಲಾಗಿದೆ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ