ಬರ ಪೀಡಿತರಿಗಾಗಿ ಕೇಂದ್ರ ಕಳುಹಿಸಿದ್ದ ನೀರನ್ನು ವಾಪಸ್ ಕಳುಹಿಸಿ ಉದ್ಧಟತನ ಮೆರೆದ ಅಖಿಲೇಶ್

ಗುರುವಾರ, 5 ಮೇ 2016 (17:32 IST)
ಬರದಿಂದ ತತ್ತರಿಸಿರುವ ಉತ್ತರ ಪ್ರದೇಶದ ಬುಂದೇಲಖಂಡ ಪ್ರಾಂತ್ಯಕ್ಕೆ ಕೇಂದ್ರ ಸರ್ಕಾರ ರೈಲಿನ ಮೂಲಕ ಕಳುಹಿಸಿದ್ದ ಕುಡಿಯುವ ನೀರನ್ನು ವಾಪಸ್ ಕಳುಹಿಸಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಮ್ಮ ಉದ್ಧಟತನ ಮೆರೆದಿದ್ದಾರೆ.

 
‘ನಮಲ್ಲಿ ಲಾತುರ್ ನಲ್ಲಿರುವಂತಹ ಕೆಟ್ಟ ಪರಿಸ್ಥಿತಿ ಇಲ್ಲ. ಒಂದು ವೇಳೆ ನಮಗೆ ನೀರಿನ ಅಗತ್ಯ ಬಿದ್ದರೆ  ರೈಲು ಇಲಾಖೆಗೆ ತಿಳಿಸುತ್ತೇವೆ’ ಎಂದು ಅಖಿಲೇಶ್ ಸರ್ಕಾರ ರೈಲ್ವೇ ಇಲಾಖೆಗೆ ಪತ್ರ ಬರೆದಿದೆ.
 
ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ರಾಜಕೀಯ ಲೆಕ್ಕಾಚಾರ ಹಾಕಿದ್ದಾರೆ ಅಖಿಲೇಶ್ ಯಾದವ್. ಮುಂದಿನ ವರ್ಷದ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಯೋಚಿಸಿರುವ ಅಖಿಲೇಶ್ ಸಮಸ್ಯೆಯಲ್ಲಿರುವ ಜನರಿಗೆ ನೆರವು ನೀಡಿದ ಕ್ರೆಡಿಟ್ ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಜನರ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಳ್ಳದೆ ಹುಂಬತನ ಮೆರೆದಿದ್ದಾರೆ. 
 
ಬುಂದೇಲಖಂಡದ ಮಹೊಬಾ ಪ್ರದೇಶದ 40 ಹಳ್ಳಿಗಳು ಭೀಕರ ಬರವನ್ನು ಎದುರಿಸುತ್ತಿದ್ದು ಕೇಂದ್ರ ರೈಲಿನ ಮೂಲಕ ನೀರು ಸರಬರಾಜು ಮಾಡಿತ್ತು. 

ವೆಬ್ದುನಿಯಾವನ್ನು ಓದಿ