ಇಂದು ತುರ್ತುಪರಿಸ್ಥಿತಿ ಹೇರುವ ಬೆದರಿಕೆಯಿಲ್ಲ: ಸಚಿವ ವೆಂಕಯ್ಯ ನಾಯ್ಡು

ಶನಿವಾರ, 28 ನವೆಂಬರ್ 2015 (13:31 IST)
ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಅಧಿಕಾರವಧಿಯಲ್ಲಿ ಸಂವಿಧಾನಕ್ಕೆ ಬೆದರಿಕೆಯಿದೆ ಎನ್ನುವ ವಿಪಕ್ಷಗಳ ಆರೋಪಗಳನ್ನು ತಳ್ಳಿಹಾಕಿದ ಸರಕಾರ, ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಹೇರಿ ಮೂಲಭೂತವಾದ ಹಕ್ಕುಗಳನ್ನು ಕಸಿದುಕೊಂಡಿರುವುದು ಕಾಂಗ್ರೆಸ್ ಎಂದು ತಿರುಗೇಟು ನೀಡಿದೆ.
 
ಸಂವಿಧಾನದಲ್ಲಿರುವ ಜಾತ್ಯಾತೀತ ಪದಕ್ಕೆ ಅನುಗುಣವಾಗಿ ಸರಕಾರ ಕಾರ್ಯನಿರ್ವಹಿಸಲಿದೆ. ಯಾವುದೇ ರೀತಿಯ ಅನುಮಾನ ಬೇಡ ಎಂದು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಂ.ವೆಂಕಯ್ಯನಾಯ್ಡು ಹೇಳಿದ್ದಾರೆ.
 
ಇಂದಿನ ಪರಿಸ್ಥಿತಿಯಲ್ಲಿ ಸಂವಿಧಾನಕ್ಕೆ ಬೆದರಿಕೆಯಿಲ್ಲ ಅಥವಾ ತುರ್ತುಪರಿಸ್ಥಿತಿ ಹೇರುವ ಅವಕಾಶಗಳಿಲ್ಲ ಅಥವಾ ರಾಜಕೀಯ ವೈರಿಗಳನ್ನು ಬಂಧಿಸುವ ಭೀತಿಯಿಲ್ಲ. ನಾವೆಲ್ಲರು ಒಂದಾಗಿ ಸಂವಿಧಾನ ಬಲಪಡಿಸಬೇಕು ಎಂದು ಸಚಿವ ನಾಯ್ಡು ಕರೆ ನೀಡಿದರು.
 
ಸಂಸತ್ತಿನಲ್ಲಿ ನಿನ್ನೆ ನಡೆದ ಜಾತಾತ್ಯೀತ ಪದದ ಚರ್ಚೆ ಸರಕಾರ ಮತ್ತು ವಿಪಕ್ಷಗಳ ಮಧ್ಯೆ ಕೋಲಾಹಲ ಮೂಡಿಸಿತ್ತು. ಜಾತ್ಯಾತೀತ ಪದ ನಮ್ಮ ಮನಸ್ಸಿನಲ್ಲಿ ಮೂಡಿ ಬರಬೇಕು ಎಂದರು. ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸುವುದು ನಮ್ಮ ಗುರಿಯಾಗಬೇಕು ಎಂದು ಹೇಳಿದರು. 
 
ಡೊಂಗಿ ಜಾತ್ಯಾತೀತವಾದಿಗಳು ಧರ್ಮ ಮತ್ತು ಕೋಮುವಾದದ ಆಧಾರದ ಮೇಲೆ ರಾಜಕೀಯ ನಡೆಸುವವರು ಜಾತ್ಯೀತಿತ ವಿರೋಧಿಗಳು ಎಂದು ಸಚಿವ ಎಂ.ವೆಂಕಯ್ಯ ನಾಯ್ಡು ಗುಡುಗಿದ್ದಾರೆ.

ವೆಬ್ದುನಿಯಾವನ್ನು ಓದಿ