ಎನ್‌ಡಿಎ ಅಧಿಕಾರಕ್ಕೆ ಬಂದ್ರೆ ಮೇಲ್ಜಾತಿಯವರಿಗಿಲ್ಲ ಸಿಎಂ ಸ್ಥಾನ: ಬಿಜೆಪಿ

ಬುಧವಾರ, 30 ಸೆಪ್ಟಂಬರ್ 2015 (14:50 IST)
ಮುಂಬರುವ ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಒಂದು ವೇಳೆ, ಎನ್‌ಡಿಎ ಮೈತ್ರಿಕೂಟ ಬಹುಮತ ಪಡೆದಲ್ಲಿ ಮೇಲ್ಜಾತಿಯ ನಾಯಕ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಬಿಜೆಪಿ ಮುಖಂಡ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
 
ಜನತಾ ಪರಿವಾರದ ಮಂಡಲ್ ರಾಜಕೀಯಕ್ಕೆ ತಿರುಗೇಟು ನೀಡಲು ಸಿದ್ದತೆ ನಡೆಸುತ್ತಿರುವ ಬಿಜೆಪಿ, ದಲಿತರು, ಹಿಂದುಳಿದ ಸಮುದಾಯಗಳನ್ನು ಓಲೈಸಲು ಹಿಂದುಳಿದ ವರ್ಗದ ವ್ಯಕ್ತಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಚಿಂತನೆ ನಡೆಸಿದೆ.
 
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಬಿಹಾರ್ ಚುನಾವಣೆ ಕೀಳುಜಾತಿ ಮತ್ತು ಮೇಲ್ಜಾತಿಯವರ ಮಧ್ಯದ ಹೋರಾಟ ಎಂದು ಘೋಷಿಸಿದ್ದರು. ಲಾಲುಗೆ ತಿರುಗೇಟು ನೀಡಲು ಬಿಜೆಪಿ ರಣತಂತ್ರ ರೂಪಿಸಿದೆ ಎನ್ನಲಾಗಿದೆ. 
 
ಬಿಹಾರ್ ಚುನಾವಣೆಯಲ್ಲಿ ಮಂಡಲ್ ಆಯೋಗದ ಮೀಸಲಾತಿ ಮತ್ತು ಜಾತಿ ಅಂಶಗಳು ಪ್ರಮುಖವಾಗಿ ಹೊರಹೊಮ್ಮಿವೆ. ಆದ್ದರಿಂದ, ಎನ್‌ಡಿಎ ಮೈತ್ರಿಕೂಟದಿಂದ ದಲಿತ, ಒಬಿಸಿ ಅಥವಾ ಇಬಿಸಿ ಸಮುದಾಯಕ್ಕೆ ಸೇರಿದ ವ್ಯಕ್ತಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ. 
 
ಬಿಜೆಪಿ ನಾಯಕ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿಕೆಯಿಂದ ಬಿಜೆಪಿಯಲ್ಲಿರುವ ಮೇಲ್ಜಾತಿಯ ನಾಯಕರು ತೀವ್ರವಾಗಿ ಅಸಮಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ