ವೈವಾಹಿಕ ದಾಖಲೆಗಳನ್ನು ಪಡೆಯುವುದು ಜಶೋದಾಬೆನ್ ಜನ್ಮ ಸಿದ್ದ ಹಕ್ಕು: ಕಾಂಗ್ರೆಸ್

ಶುಕ್ರವಾರ, 12 ಫೆಬ್ರವರಿ 2016 (15:04 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಪತ್ನಿ ಜಶೋದಾಬೆನ್ ಪಾಸ್‌ಪೋರ್ಟ್ ಪಡೆಯಲು ವೈವಾಹಿಕ ದಾಖಲೆಗಳ ಮಾಹಿತಿ ಪಡೆಯಲು ಅರ್ಜಿ ಸಲ್ಲಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕಾಂಗ್ರೆಸ್ ಹೇಳಿಕೆ ನೀಡಿದೆ.
 
ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪಾಸ್‌ಪೋರ್ಟ್ ಪಡೆಯುವ ಸಂದರ್ಭದಲ್ಲಿ ವಿವಾಹಕ್ಕೆ ಸಂಬಂಧಿಸಿದ ಯಾವ ದಾಖಲೆಗಳನ್ನು ಮಂಡಿಸಿದ್ದರು ಎಂದು ಆರ್‌ಟಿಐ ಕಾರ್ಯಕರ್ತರೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.
 
ಪತಿ ಮೋದಿ ಯಾವ ವೈವಾಹಿಕ ದಾಖಲೆಗಳನ್ನು ಸಲ್ಲಿಸಿ ಪಾಸ್‌ಪೋರ್ಟ್ ಪಡೆದಿದ್ದಾರೆ ಎನ್ನುವ ಬಗ್ಗೆ ತಿಳಿಯುವ ಹಕ್ಕು ಜಶೋದಾಬೆನ್ ಅವರಿಗಿದೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಮನೀಷ್ ತಿವಾರಿ ಸಮರ್ಥಿಸಿಕೊಂಡಿದ್ದಾರೆ.
 
ಕಳೆದ ನವೆಂಬರ್ ತಿಂಗಳಲ್ಲಿ ಜಶೋದಾಬೆನ್, ಮೋದಿಯವರನ್ನು ವಿವಾಹವಾದ ಬಗ್ಗೆ ಪ್ರಮಾಣ ಪತ್ರ ಅಥವಾ ಜಂಟಿ ಅಫಿಡವಿಟ್ ನೀಡುವಲ್ಲಿ ವಿಫಲವಾಗಿದ್ದಾರೆ ಎಂದು ಅವರ ಪಾಸ್‌ಪೋರ್ಟ್ ಅರ್ಜಿಯನ್ನು ತಿರಸ್ಕರಿಸಲಾಗಿತ್ತು.
 
ಒಂದು ವೇಳೆ, ಪ್ರಧಾನಮಂತ್ರಿಯವರ ಪತ್ನಿಗೆ ಪಾಸ್‌ಪೋರ್ಟ್ ಅಗತ್ಯವಿದೆ ಎಂದಾದಲ್ಲಿ ಸರಕಾರ ಅವರಿಗೆ ಪಾಸ್‌ಪೋರ್ಟ್ ನೀಡಬೇಕು. ಇಲ್ಲವಾದಲ್ಲಿ ಮೋದಿಯವರು ಯಾವ ವಿವಾಹ ಪ್ರಮಾಣ ಪತ್ರ ಸಲ್ಲಿಸಿ ಪಾಸ್‌ಪೋರ್ಟ್ ಪಡೆದಿದ್ದಾರೆ ಎನ್ನುವುದನ್ನು ತಿಳಿಯುವ ಹಕ್ಕು ಜಶೋದಾಬೆನ್ ಅವರಿಗಿದೆ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ