ಮೋದಿ ಸುಳ್ಳಿನ ಸರದಾರ, ಶೀಘ್ರದಲ್ಲಿಯೇ ತಕ್ಕ ಪಾಠ ಕಲಿಸ್ತೇವೆ: ಕಾಂಗ್ರೆಸ್

ಶನಿವಾರ, 18 ಏಪ್ರಿಲ್ 2015 (17:25 IST)
ಭಾರತ ಭಿಕ್ಷೆ ಬೇಡುವುದನ್ನು ನಿಲ್ಲಿಸಿದೆ, ಹಗರಣಗಳ ಭಾರತ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿದೇಶ ಪ್ರವಾಸದಲ್ಲಿ ಸುಳ್ಳು ಆರೋಪಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಮೋದಿ ಭೇಟಿ ನೀಡುವ ಪ್ರತಿಯೊಂದು ದೇಶದಲ್ಲಿ ವಕ್ತಾರರನ್ನು ನೇಮಿಸುವ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ ಮಾತನಾಡಿ,  ದೇಶಿಯ ರಾಜಕಾರಣವನ್ನು ವಿದೇಶದಲ್ಲಿ ಚರ್ಚಿಸಬಾರದು ಎನ್ನುವ ಕನಿಷ್ಠ ಜ್ಞಾನವು ಇಲ್ಲದ ಮೋದಿ ಪ್ರಧಾನಿಯಂತೆ ವರ್ತಿಸಲಿ ಆರ್‌ಎಸ್‌ಎಸ್ ಪ್ರಚಾರಕರಂತಲ್ಲ ಎಂದು ತಿರುಗೇಟು ನೀಡಿದ್ದಾರೆ.

ಮೋದಿಯವರ ಇಂತಹ ವರ್ತನೆ ಇನ್ನೂ ಸಹಿಸಲು ಸಾಧ್ಯವಿಲ್ಲ. ಒಂದು ವೇಳೆ ವಿದೇಶ ಪ್ರವಾಸಗಳಲ್ಲಿ ಇಂತಹ ವರ್ತನೆ ಮುಂದುವರಿಸಿದಲ್ಲಿ ಆಯಾ ದೇಶದಲ್ಲಿರುವ ಕಾಂಗ್ರೆಸ್ ವಕ್ತಾರರು ಕೂಡಲೇ ತಿರುಗೇಟು ನೀಡಲಿದ್ದಾರೆ ಎಂದು ಹೇಳಿದ್ದಾರೆ.  

42 ವರ್ಷಗಳ ನಂತರ ಭಾರತದ ಪ್ರಧಾನಿ ಕೆನಡಾ ದೇಶಕ್ಕೆ ಭೇಟಿ ನೀಡಿದ್ದಾರೆ ಎನ್ನುವ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್, ಕಳೆದ 2010ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೆನಡಾ ದೇಶಕ್ಕೆ ಮೂರು ದಿನಗಳ ಭೇಟಿ ನೀಡಿದ್ದರು. ಉಭಯ ಪ್ರಧಾನಿಗಳು ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದನ್ನು ಮೋದಿ ಮರೆತಿರಬಹುದು ಎಂದು ಕಿಡಿಕಾರಿದ್ದಾರೆ.

ಕೆನಡಾ ದೇಶದ ಪ್ರವಾಸದಲ್ಲಿದ್ದಾಗ ನೀಡಿರುವ ಸುಳ್ಳು ಹೇಳಿಕೆಗಳ ಬಗ್ಗೆ ಮೋದಿ ದೇಶದ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ದೇಶಿಯ ರಾಜಕಾರಣವನ್ನು ವಿದೇಶದಲ್ಲಿ ಚರ್ಚಿಸಬಾರದು ಎನ್ನುವ ಕನಿಷ್ಠ ಜ್ಞಾನವು ಇಲ್ಲದ ಮೋದಿ ಪ್ರಧಾನಿಯಂತೆ ವರ್ತಿಸಲಿ ಆರ್‌ಎಸ್‌ಎಸ್ ಪ್ರಚಾರಕರಂತಲ್ಲ ಎಂದು ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಟೀಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ