ಇದೀಗ, ಮಹಿಳೆಯರಿಗೆ ಮಿಸ್ಡ್ ಕಾಲ್ ನೀಡಿದಲ್ಲಿ ಜೈಲಿಗೆ ಹೋಗಬೇಕಾದಿತು ಎಚ್ಚರ

ಬುಧವಾರ, 24 ಸೆಪ್ಟಂಬರ್ 2014 (13:39 IST)
ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಬಿಹಾರ್ ಪೊಲೀಸರು ಮಹಿಳೆಗೆ ಮಿಸ್‌ಕಾಲ್ ಮಾಡಿದ್ದ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.  
 
ದೇಶಾದ್ಯಂತ ಕುತೂಹಲ ಕೆರಳಿಸಿದ್ದ ನಿರ್ಭಯಾ ಗ್ಯಾಂಗ್‌ರೇಪ್ ಪ್ರಕರಣದ ನಂತರ ಜಾರಿಗೆ ತರಲಾದ ಐಪಿಸಿ ಕಾಯ್ದೆ 354ಬಿ ಪ್ರಕಾರ, ಮಹಿಳೆಯೊಬ್ಬಳಿಗೆ ಮಿಸ್ ಕಾಲ್ ನೀಡಿದ್ದಲ್ಲಿ ಪೊಲೀಸ್ ಠಾಣೆಯಲ್ಲಿ ಮಿಸ್‌ಕಾಲ್ ಕರೆ ಮಾಡಿದ ವ್ಯಕ್ತಿಯ ವಿರುದ್ಧ ಆಕೆ ಪ್ರಕರಣ ದಾಖಲಿಸಬಹುದಾಗಿದೆ.   
 
ಮಹಿಳೆಗೆ ಮಿಸ್ ಕಾಲ್ ನೀಡಿದ ವ್ಯಕ್ತಿ ಪುರುಷನಾಗಿದ್ದು ಅಪರಾಧದ ಉದ್ದೇಶ ಹೊಂದಿದಲ್ಲಿ ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಬಹುದಾಗಿದೆ ಎಂದು ಪೊಲೀಸ್ ಅಧಿಕಾರಿ ಅರವಿಂದ್ ಪಾಂಡೆ ಮಾಹಿತಿ ನೀಡಿದ್ದಾರೆ.  
 
ಮಿಸ್ ಕಾಲ್ ನೀಡಿ ಆರೋಪಿಗಳು ತೊಂದರೆ ಕೊಡುತ್ತಿದ್ದಲ್ಲಿ ಕಾನೂನಿನ ಪ್ರಕಾರ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಬಹುದು ಎನ್ನುವ ಕಾನೂನಿನ ಅರಿವು ಯುವತಿಯರಿಗಿರಬೇಕು.  ನೆರೆಹೊರೆಯ ವ್ಯಕ್ತಿಗಳು ಒಂದು ವೇಳೆ ಯುವತಿಯರಿಗೆ ಲೈಂಗಿಕ ಕಿರುಳ ನೀಡುತ್ತಿದ್ದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕೂಡಾ ದೂರು ನೀಡಬಹುದು ಎಂದು ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ