ಐಸಿಐಸಿಐ ಎಟಿಎಂಗಳಿಂದ ಹಣ ಪಡೆಯಲು ಈಗ ಕಾರ್ಡ್ ಬೇಕಿಲ್ಲ

ಶುಕ್ರವಾರ, 12 ಸೆಪ್ಟಂಬರ್ 2014 (11:54 IST)
ತಮ್ಮ ಸ್ವಂತ ಬ್ಯಾಂಕ್ ಎಟಿಎಂಗಳಿಂದ ಹಣ ಪಡೆಯುವುದನ್ನು ಮತ್ತಷ್ಟು ಸುಲಭಗೊಳಿಸಿರುವ ಐಸಿಐಸಿಐ ಬ್ಯಾಂಕ್, ಡೆಬಿಟ್ ಕಾರ್ಡ್ ಇಲ್ಲದಿದ್ದರೂ ಮತ್ತು ತಮ್ಮ ಬ್ಯಾಂಕ್‌ನಲ್ಲಿ ಖಾತೆ ಹೊಂದಿರದಿದ್ದರೂ ಕೂಡ, ನಗದು ಪಡೆಯುವ  ಹೊಸ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿದೆ.

ಕೇವಲ ಮೊಬೈಲ್ ಪೋನ್ ಮತ್ತು ವೆರಿಫಿಕೇಶನ್ ಕೋಡ್ ಬಳಸಿ ಐಸಿಐಸಿಐ ಬ್ಯಾಂಕ್ ಎಟಿಎಂಗಳಿಂದ ಗ್ರಾಹಕರು ಹಣ ಪಡೆಯಬಹುದು ಎಂದು ಬ್ಯಾಂಕ್ ಮಾಹಿತಿ ನೀಡಿದೆ. 
 
ಈ ಸೌಲಭ್ಯ ಬಳಸಿ ಹಣ ಕಳುಹಿಸುವವರು, ಮೊದಲನೆಯದಾಗಿ ಹಣ ಸ್ವೀಕರಿಸುವವರ ಹೆಸರು, ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ನೆಟ್ ಬ್ಯಾಂಕಿಂಗ್ ಮೂಲಕ ನಮೂದಿಸಬೇಕು. 
 
ಪ್ರತಿಯಾಗಿ ಹಣ ಸ್ವೀಕರಿಸುವವರಿಗೆ 6 ಅಂಕಿಗಳ ವೆರಿಫಿಕೇಷನ್ ಕೋಡ್ ಮತ್ತು ಹಣ ಕಳುಹಿಸುವವರಿಗೆ ನಾಲ್ಕು ಅಂಕಿಯ ವೆರಿಫಿಕೇಷನ್ ಕೋಡ್, ಎಸ್ಸೆಮ್ಮೆಸ್ ಮೂಲಕ ರವಾನೆಯಾಗುತ್ತದೆ.  
 
ಈ ಕೋಡ್ ಬಳಸುವ ಮೂಲಕ ಹಣ ಸ್ವೀಕರಿಸುವ ಎಟಿಎಂನಿಂದ ಹಣ ಪಡೆಯಬಹುದು.
 
10 ಸಾವಿರಕ್ಕಿಂತ ಹೆಚ್ಚಿನ ಎಟಿಎಂಗಳಲ್ಲಿ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ