ಪರಮಾಣು ಬಾಂಬ್ ಹೊತ್ತೊಯ್ಯುವ ಸಾಮರ್ಥ್ಯದ ನಿರ್ಭಯ್‌ ಕ್ಷಿಪಣಿ ಯಶಸ್ವಿ ಪರೀಕ್ಷೆ

ಶುಕ್ರವಾರ, 17 ಅಕ್ಟೋಬರ್ 2014 (15:50 IST)
ಪರಮಾಣು ಬಾಂಬ್ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ 700 ಕಿ.ಮೀ. ದೂರದಿಂದ ಗುರಿ ಮುಟ್ಟಬಲ್ಲ ನಿರ್ಭಯ್‌ ಕ್ಷಿಪಣಿಯ ಪ್ರಾಯೋಗಿಕ ಪರೀಕ್ಷೆ ಶುಕ್ರವಾರ ಯಶಸ್ವಿಯಾಗಿ ನೆರವೇರಿದೆ.
 
ಒಡಿಶಾದ ಚಂಡಿಪುರ್‌ ಕೇಂದ್ರದಿಂದ ಈ ಪರೀಕ್ಷಾರ್ಥ ಹಾರಾಟ ನಡೆಸಿದ್ದು, ಈ ಮೊದಲು ನಿರ್ಭಯ್‌ ಕ್ಷಿಪಣಿಯನ್ನು ಮಾರ್ಚ್‌ 12, 2013ರಂದು ತಾಂತ್ರಿಕ ಪರೀಕ್ಷೆ ಮಾಡಲಾಗಿತ್ತು.
 
ಶುಕ್ರವಾರ ಬೆಳಿಗ್ಗೆ 10.04ರ ವೇಳೆಗೆ ಕ್ಷಿಪಣಿ ಹಾರಾಟ ನಡೆಸುದ್ದು, 800 ಕಿ.ಮೀ ಚಿಮ್ಮಿದ ನಿರ್ಭಯ್‌ 11 ಗಂಟೆ ಹೊತ್ತಿಗೆ ಬಂಗಾಲಿಕೊಲ್ಲಿಯತ್ತ ತಿರುಗಿದ್ದು, ಹಾರಾಟ ಯಶಸ್ವಿಯಾಗಿದೆ ಎಂದು ಡಿಆರ್‌ಡಿಒ ಅಧಿಕೃತರು ಹೇಳಿದ್ದಾರೆ.
 
ಉಳಿದ ಕ್ಷಿಪಣಿಗಳಿಗೆ ಹೋಲಿಸಿದರೆ ಇದು ಅತ್ಯಂತ ಹಗುರ ಹಾಗೂ ನಾಜೂಕಾಗಿ ಸಿದ್ಧಗೊಳಿಸಲಾಗಿದೆ. ಯಾವ ಕಡೆ ಬೇಕಾದರು ಸುಲಭವಾಗಿ ತಿರುಗಬಲ್ಲ, ಹಾಗೂ ಆಕಾಶದಲ್ಲಿ ಯಾವುದೇ ಕಸರತ್ತಿಗೂ ಸೈ ಎನಿಸುವ ಶಕ್ತಿಯನ್ನು ನಿರ್ಭಯ್‌ ಹೊಂದಿದೆ.

ವೆಬ್ದುನಿಯಾವನ್ನು ಓದಿ