ದೆಹಲಿಯಲ್ಲಿ ಮತ್ತೆ ಸಮ-ಬೆಸ ಸಂಚಾರಿ ಸಾರಿಗೆ ಯೋಜನೆ ಜಾರಿ: ಅರವಿಂದ್ ಕೇಜ್ರಿವಾಲ್

ಗುರುವಾರ, 11 ಫೆಬ್ರವರಿ 2016 (20:32 IST)
ಮಾಲಿನ್ಯ ನಿಯಂತ್ರಣಕ್ಕಾಗಿ ದೆಹಲಿ ಸರಕಾರ ಮತ್ತೆ ಸಮ-ಬೆಸ ಸಾರಿಗೆ ಯೋಜನೆಯನ್ನು ಏಪ್ರಿಲ್ 15-30ರವರೆಗೆ ಜಾರಿಗೊಳಿಸಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ-ಬೆಸ ಸಾರಿಗೆ ಯೋಜನೆ ಮತ್ತೆ ಜಾರಿಗೊಳಿಸುವ ಬಗ್ಗೆ ಬಹುತೇಕ ಜನ ತಮ್ಮ ಒಲವು ತೋರಿದ್ದಾರೆ ಎಂದು ತಿಳಿಸಿದ್ದಾರೆ.
 
ಸಾರ್ವಜನಿಕ ಸಂಚಾರಿ ವ್ಯವಸ್ಥೆ ಸಂಪೂರ್ಣವಾಗಿ ಸಿದ್ದವಾಗಿಲ್ಲವಾದ್ದರಿಂದ ಪ್ರತಿ ತಿಂಗಳು ಹದಿನೈದು ದಿನಗಳ ಕಾಲ ಸಮ-ಬೆಸ ಸಾರಿಗೆ ಯೋಜನೆ ಜಾರಿಗೊಳಿಸಬೇಕು ಎನ್ನುವುದು ಸರಕಾರ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
 
ವಿದ್ಯಾರ್ಥಿಗಳ ಬೋರ್ಡ್ ಪರೀಕ್ಷೆಗಳು ಏಪ್ರಿಲ್ 12 ಕ್ಕೆ ಮುಕ್ತಾಯಗೊಳ್ಳಲಿರುವುದರಿಂದ ಏಪ್ರಿಲ್ 15 ರಿಂದ ಏಪ್ರಿಲ್ 30 ರವರೆಗೆ ಜಾರಿಗೊಳಿಸಲು ನಿರ್ಧರಿಸಲಾಗಿದೆ, ವಿಐಪಿಗಳು ಮತ್ತು ಮಹಿಳೆಯರು ಹಾಗೂ ದ್ವಿಚಕ್ರ ವಾಹನ ಸವಾರರಿಗೆ ವಿನಾಯಿತಿ ನೀಡಲಾಗಿದೆ.
 
ದೆಹಲಿ ಸರಕಾರ 1000 ಐಷಾರಾಮಿ ಬಸ್‌ಗಳು ಸೇರಿದಂತೆ 3 ಸಾವಿರ ಬಸ್‌ಗಳನ್ನು ಖರೀದಿಸಲಿದ್ದು, ಡಿಸೆಂಬರ್ ವೇಳೆಗೆ ರೋಡಿಗಿಳಿಯಲಿವೆ. ಬಿಆರ್‌ಟಿ ಕಾರಿಡಾರ್‌ಗಳ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ