ನೊಯ್ಡಾ ಮಾಲ್‌ನಲ್ಲಿ ಮಹಿಳೆಯನ್ನು ರೇಪ್ ಮಾಡಿದ ಹಳೆಸಂಗಾತಿ

ಸೋಮವಾರ, 2 ಮಾರ್ಚ್ 2015 (19:57 IST)
ಜನಪ್ರಿಯಾ ನೊಯ್ಡಾ ಮಾಲ್‌ನ ವಾಶ್‌ರೂಂನಲ್ಲಿ  ಸೇಲ್ಸ್‌ಮ್ಯಾನ್ ನನ್ನ ಮೇಲೆ ರೇಪ್ ಮಾಡಿದ್ದಾನೆ ಎಂದು ದೆಹಲಿಯ ಮಹಿಳೆಯೊಬ್ಬರು ದೂರು ನೀಡಿದ್ದಾರೆ.   ಈ ಘಟನೆಗೆ ಸಂಬಂಧಿಸಿದಂತೆ ದೆಹಲಿಯ ಜೈಟ್‌ಪುರದ ಯೋಗೇಶ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಯೋಗೇಶ್ ಮಾಲ್  ಶೋರೂಂನಲ್ಲಿ ಮಾರಾಟಗಾರನ ಹುದ್ದೆಯಲ್ಲಿದ್ದ. ಮಹಿಳೆ ದೆಹಲಿ ನಿವಾಸಿಯಾಗಿದ್ದು,  ಇದಕ್ಕೆ ಮುಂಚೆ ಆರೋಪಿ ಜೊತೆ ಮುಂಚೆ ಲೈವ್ ಇನ್ ಸಂಬಂಧ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ಮಾಲ್‌ಗೆ ಬಂದಿದ್ದಾಗ ಅವರನ್ನು ಹಿಂಬಾಲಿಸಿಕೊಂಡು ಹೋದ ಯೋಗೇಶ್ ವಾಶ್‌ರೂಂನಲ್ಲಿ ಅತ್ಯಾಚಾರ ಮಾಡಿದ. ಆರೋಪಿಯನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ