ಮುಫ್ತಿ ಸರಕಾರ ನನ್ನ ವಿರುದ್ಧ ಗೂಢಚಾರಿಕೆ ನಡೆಸುತ್ತಿದೆ: ಒಮರ್ ಅಬ್ದುಲ್ಲಾ ಆರೋಪ

ಶುಕ್ರವಾರ, 4 ಸೆಪ್ಟಂಬರ್ 2015 (18:49 IST)
ಜಮ್ಮು ಕಾಶ್ಮಿರ ಸರಕಾರ ತಮ್ಮ ವಿರುದ್ಧ ಗೂಢಚಾರ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆರೋಪಿಸಿದ್ದಾರೆ.
 
ಜಮ್ಮು ಕಾಶ್ಮಿರ ಸರಕಾರಕ್ಕೆ ನನ್ನ ಬಗ್ಗೆ ಮಾಹಿತಿ ಬೇಕಾದಲ್ಲಿ ನೇರವಾಗಿ ಸಂಪರ್ಕಿಸಿ ಮಾಹಿತಿ ಪಡೆಯಲಿ. ಮಾಹಿತಿ ನೀಡಲು ನೀನು ಸಿದ್ದವಾಗಿದ್ದೇನೆ, ಅದನ್ನು ಬಿಟ್ಟು ಗೂಢಚಾರ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ನನ್ನ ಸಂದರ್ಶನಕ್ಕಾಗಿ ಮನೆ ಗೇಟಿನ ಬಳಿ ಬಂದ ಪತ್ರಕರ್ತೆಯೊಬ್ಬಳನ್ನು ತಡೆದ ಸಿಐಡಿ ಅಧಿಕಾರಿ, ನೀವು ಯಾರು ಯಾವ ಕಾರಣಕ್ಕಾಗಿ ಮನೆಗೆ ಭೇಟಿ ನೀಡಿದ್ದೀರಿ ಎಂದು ಕೇಳುವ ಉದ್ದೇಶವೇನು ಎಂದು ಒಮರ್ ಟ್ವೀಟ್ ಮಾಡಿದ್ದಾರೆ.   
 
ಮುಖ್ಯಮಂತ್ರಿ ಮುಫ್ತಿಯವರೇ ನನ್ನ ಬಗ್ಗೆ ಮಾಹಿತಿ ಬೇಕಾದಲ್ಲಿ ಫೋನ್ ಕರೆ ಮಾಡಿ ನೇರವಾಗಿ ಕೇಳಿ. ಅದನ್ನು ಬಿಟ್ಟು ನನ್ನ ಮನೆಯ ಗೇಟಿನ ಬಳಿ ಗೂಢಚಾರರನ್ನು ನಿಲ್ಲಿಸಬೇಡಿ ಎಂದು ಜಮ್ಮು ಕಾಶ್ಮಿರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಲಹೆ ನೀಡಿದ್ದಾರೆ.  
 

ವೆಬ್ದುನಿಯಾವನ್ನು ಓದಿ