ಸನ್ನಿ ಲಿಯೊನ್ ವಿರುದ್ಧದ ಸಿಂಘ್ವಿ ಹೇಳಿಕೆಯನ್ನು ಖಂಡಿಸಿದ ಒಮರ್ ಅಬ್ದುಲ್ಲಾ

ಶನಿವಾರ, 11 ಏಪ್ರಿಲ್ 2015 (15:06 IST)
ಪಾಶ್ಚಾತ್ಯರೇ ತಿರಸ್ಕರಿಸಿರುವ ಸನ್ನಿ ಲಿಯೋನ್‌ಳಿಗೆ ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸಲು ಅವಕಾಶ ನೀಡಬಾರದು ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ವಿರುದ್ಧ ಜಮ್ಮ ಮತ್ತು ಕಾಶ್ಮೀರದ ಪೂರ್ವ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕಿಡಿಕಾರಿದ್ದಾರೆ. 

"ಇದು ಫೇಕ್ ಅಕೌಂಟ್‌ನಿಂದ ಬಂದಿರುವ ಟ್ವೀಟ್ ಎಂದು ನಾನು ಭಾವಿಸಿದ್ದೆ. ಆದರೆ ಆ ಟ್ವಿಟ್ ಬಂದಿರುವುದು ಸಿಂಘ್ವಿ ಖಾತೆಯಿಂದಲೇ. ಈ ಅಸಂಬದ್ಧ ಟ್ವೀಟ್ ಮಾಡಿದ್ದಾದರೂ ಏಕೆ ಎಂದು ಅರ್ಥವಾಗುತ್ತಿಲ್ಲ", ಎಂದು ಒಮರ್ ಟ್ವಿಟ್ ಮಾಡಿದ್ದಾರೆ. 
 
ಸನ್ನಿ ಬಾಲಿವುಡ್‌ನ ಸ್ಟಾರ್ ಐಕಾನ್ ಆಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿ ಸಿಂಘ್ವಿ ಟ್ವೀಟ್ ಪ್ರಕಟಿಸಿದ್ದರು.
 
"ಪಾಶ್ಚಾತ್ಯರೇ ತಿರಸ್ಕರಿಸಿರುವ ಸನ್ನಿ ಲಿಯೊನ್‌ಳಿಗೆ ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸಲು ಮತ್ತು ಬಾಲಿವುಡ್‌ನ ಐಕಾನ್ ಆಗಿ ಬೆಳೆಯಲು ಬಿಡಬಾರದು", ಎಂದು ಸಿಂಘ್ವಿ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದರು.

ವೆಬ್ದುನಿಯಾವನ್ನು ಓದಿ