ಸುಂದರವಾದ ಮಹಿಳೆಯರಿಗೆ ಮಾತ್ರ ಸರಕಾರದಿಂದ ರಕ್ಷಣೆ!

ಮಂಗಳವಾರ, 4 ಆಗಸ್ಟ್ 2015 (13:54 IST)
ಆಮ್ ಆದ್ಮಿ ನಾಯಕ, ದೆಹಲಿ ಕಾನೂನು ಸಚಿವ ಸೋಮನಾಥ್ ಭಾರತಿ ಮತ್ತೆ ವಿವಾದದಲ್ಲಿ ಸಿಲುಕಿದ್ದಾರೆ. 'ದೆಹಲಿ ಪೊಲೀಸ್‌ ಇಲಾಖೆ ಆಪ್‌ ಸರ್ಕಾರದ ಅಡಿಯಲ್ಲಿ ಬಂದರೆ ಸುಂದರವಾದ ಮಹಿಳೆಯರಿಗೆ ತಾವಿನ್ನು ಸುರಕ್ಷಿತರು ಎಂಬ ಭಾವ ಹುಟ್ಟಬಹುದು' ಎಂದು ಸೋಮನಾಥ್ ಭಾರತಿ ಹೇಳಿದ್ದಾರೆ.

ದೆಹಲಿ ವಿಧಾನ ಸಭೆಯಲ್ಲಿ ಮಹಿಳೆಯ ಮೇಲಿನ  ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದ್ದಾಗ ಮಾತನಾಡಿದ ಭಾರತಿ, "ಭದ್ರತೆಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರೆ, ಸುಂದರವಾದ ಮಹಿಳೆಯರು ಮಧ್ಯರಾತ್ರಿಯಲ್ಲೂ ನಿರ್ಭೀತಿ ಓಡಾಡಲು ಶಕ್ತಳಾಗುತ್ತಾಳೆ ಎಂಬ ವಿಶ್ವಾಸ ನನಗಿದೆ", ಎಂದಿದ್ದಾರೆ. 
 
ಸಚಿವರ ಈ ಹೇಳಿಕೆಗೆ ವಿರೋಧ ಪಕ್ಷಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಹ ಈ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಸಚಿವರ ಪತ್ನಿ ಲಿಪಿಕಾ ಮಿತ್ರಾ ಕೂಡಾ ಪತಿಯ ಈ ಮಾತಿಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 
 
ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಮಹಿಳಾ ಆಯೋಗದ ಮಾಜಿ ಮುಖ್ಯಸ್ಥೆ ಬರ್ಖಾ ಶುಕ್ಲಾ, 'ಭಾರತಿ ಪತ್ನಿ ತಕ್ಕಮಟ್ಟಿನ ಸೌಂದರ್ಯವನ್ನು ಹೊಂದಿರುವವರು. ಆದ್ದರಿಂದ ಅವರು ಸುಂದರವಾದ ಮಹಿಳೆಯರ ಬಗ್ಗೆ ಯೋಚಿಸುತ್ತಿದ್ದಾರೆ', ಎಂದು ವ್ಯಂಗ್ಯವಾಡಿದ್ದಾರೆ. 
 
ಕಳೆದ ಕೆಲವು ದಿನಗಳ ಹಿಂದೆ ಭಾರತಿ ಪತ್ನಿ ಲಿಪಿಕಾ ಪತಿಯ ಮೇಲೆ ಕೌಟುಂಬಿಕ ದೌರ್ಜನ್ಯದ ಆರೋಪವನ್ನು ಹೊರಿಸಿದ್ದರು. ಆದರೆ ಅದನ್ನವರು ನಿರಾಕರಿಸಿದ್ದಾರೆ. ಪ್ರಕರಣ ಕೋರ್ಟ್‌ನಲ್ಲಿದೆ. 

ವೆಬ್ದುನಿಯಾವನ್ನು ಓದಿ