ಫೆಬ್ರವರಿ 14ಕ್ಕೆ ಆಪ್‌ 'ಏಕ್ ಸಾಲ್ ಬೆಮಿಸಾಲ್' ಕಾರ್ಯಕ್ರಮ

ಮಂಗಳವಾರ, 9 ಫೆಬ್ರವರಿ 2016 (18:38 IST)
ಅಧಿಕಾರಕ್ಕೇರಿ ಒಂದು ವರ್ಷವನ್ನು ಪೂರೈಸುತ್ತಿರುವ ಕೇಜ್ರಿವಾಲ್ ಸರ್ಕಾರ ತಮ್ಮ ಒಂದು ವರ್ಷದ ಸಾಧನೆಯನ್ನು ಬಿಂಬಿಸಲು "ಏಕ್ ಸಾಲ್ ಬೆಮಿಸಾಲ್" (ಅದ್ವಿತೀಯ ಒಂದು ವರ್ಷ) ಎಂಬ ಘೋಷಣೆಯೊಂದಿಗೆ ಫೆಬ್ರುವರಿ 14 ರಂದು ನವದೆಹಲಿಯಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ. 

ಮುಖ್ಯಮಂತ್ರಿಯವರು ಜನರೊಂದಿಗೆ ನೇರ ಸಂವಹನ ನಡೆಸಿ ಅವರಿಂದ ಸಲಹೆ ಪಡೆಯಲು ಆದಷ್ಟು ಬೇಗ ಸರ್ಕಾರ ದೂರವಾಣಿ ಸಂಖ್ಯೆಯೊಂದನ್ನು ಪ್ರಾರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ.
 
ಛತ್ರಸಾಲ್ ಮೈದಾನ ಅಥವಾ ತಾಲ್ಕಟೋರ ಮೈದಾನದಲ್ಲಿ  ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗುತ್ತಿದ್ದು ಈ ಕುರಿತು ಸರ್ಕಾರ ಇನ್ನೂ ಅಂತಿಮ ನಿರ್ಧಾರವನ್ನು ಕೈಗೊಂಡಿಲ್ಲ. 
 
ಈ ಕಾರ್ಯಕ್ರಮದಲ್ಲಿ ಸರಕಾರದ ಒಂದು ವರ್ಷದ ಸಾಧನೆಯ ಕುರಿತಾದ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು. ಈ ಸಂದರ್ಭದಲ್ಲಿ  ಪ್ರೇಕ್ಷಕರಿಂದರೂ  ಆಡಳಿತದ ಬಗ್ಗೆ  ಸರ್ಕಾರ ಸಲಹೆಗಳನ್ನು ಪಡೆದುಕೊಳ್ಳಲಿದೆ.
 
ಎಲ್ಲ ಕ್ಯಾಬಿನೇಟ್ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ಹಿರಿಯ ಸರ್ಕಾರಿ ಅಧಿಕಾರಿಗಳೊಬ್ಬರು ಮಾಹಿತಿ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ