ಟ್ಯಾಬ್ಲೆಟ್‌ನೊಂದಿಗೆ 12 ತಿಂಗಳು ಇಂಟರ್‌ನೆಟ್ ಉಚಿತ

ಸೋಮವಾರ, 21 ಜುಲೈ 2014 (18:43 IST)
ಭಾರತದಲ್ಲಿ ದತ್ತಾಂಶ ಸೇವೆ ಮತ್ತು ಟ್ಯಾಬ್ಲೆಟ್‌ ಗಳ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಹೆಚ್ಚಿನ ಆದ್ಯತೆ ನೀಡ ಲಾಗುವುದು. ಕೆನಡಾದ ಷೇರುಪೇಟೆಯಲ್ಲಿ ಸಂಗ್ರಹಿಸಲಾದ 3 ಕೋಟಿ ಕೆನಡಾ ಡಾಲರ್‌ಗಳಲ್ಲಿ ಹೆಚ್ಚಿನ ಹಣವನ್ನು ಇದಕ್ಕಾಗಿಯೇ ಬಳಸಲಾಗುವುದು ಎಂದು ‘ಡೇಟಾವಿಂಡ್‌’ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಸುನೀತ್‌ ಸಿಂಗ್ ಟುಲಿ ಹೇಳಿದರು.
 
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ೧೨ ತಿಂಗಳ ಉಚಿತ ಅಂತರ್ಜಾಲ ಸಂಪರ್ಕ ಸೌಲಭ್ಯದ ಜತೆ ‘ಯುಬಿ ಸ್ಲೇಟ್‌’ ಟ್ಯಾಬ್ಲೆಟ್‌ಗಳನ್ನು ಅಗ್ಗದ ದರದಲ್ಲಿ ಒದಗಿಸುವ ಯೋಜನೆಗೆ ಚಾಲನೆ ನೀಡಿದ ಅವರು, ಅಮೃತಸರದಲ್ಲಿರುವ ಟ್ಯಾಬ್ಲೆಟ್‌ ತಯಾರಿಕಾ ಘಟಕದ ಸಾಮರ್ಥ್ಯ ವಿಸ್ತರಣೆಗಾಗಿ ಹಣ ವಿನಿಯೋಗಿಸಲಾಗುವುದು. ಜತೆಗೆ ಭಾರತದಲ್ಲಿ ಅಂತರ್ಜಾಲ ಸೇವೆ ಬಳಕೆದಾರರ ಸಂಖ್ಯೆ ಹೆಚ್ಚಿಸುವುದೂ ಕಂಪೆನಿಯ ಉದ್ದೇಶವಾಗಿದೆ ಎಂದರು.
 
ದೊಡ್ಡ ಕಂಪೆನಿಗಳ ದುಬಾರಿ ಟ್ಯಾಬ್ಲೆಟ್‌ಗಳು ಕೇವಲ ನಗರ ಕೇಂದ್ರಿತವಾಗಿವೆ. ನಮ್ಮ ಕಂಪೆನಿ ಗ್ರಾಮೀಣ ಭಾಗವನ್ನೂ ಒಳಗೊಂಡಂತೆ ದೇಶದ ಎಲ್ಲ ಮೂಲೆಗಳನ್ನೂ ತಲಪುವ ಗುರಿ ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿರೂ3000ರಿಂದರೂ6000 ದರ ಶ್ರೇಣಿಯ ‘ಯುಬಿಸ್ಲೇಟ್ ೭ಸಿಜೆಡ್’ ಮತ್ತು ‘ಯುಬಿಸ್ಲೇಟ್ ೩ಜಿ೭’ ಟ್ಯಾಬ್ಲೆಟ್ ಪಿ.ಸಿಗಳನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಈ ಟ್ಯಾಬ್ಲೆಟ್‌ಗಳನ್ನು ಖರೀದಿಸಿ ದವರಿಗೆ ೧೨ ತಿಂಗಳು ಉಚಿತ  ಅಂತರ್ಜಾಲ ಸಂಪರ್ಕ ಸೌಲಭ್ಯವೂ ದೊರಕಲಿದೆ. ಕಡಿಮೆ ಬೆಲೆಯವೇ ಆಗಿದ್ದರೂ ಈ  ಟ್ಯಾಬ್ಲೆಟ್‌ಗಳು ‘ಯುಬಿಸರ್ಫರ್ ಬ್ರೌಸರ್’ ನೆರವಿನಿಂದ ಅತ್ಯಂತ ವೇಗದ ಅಂತರ್ಜಾಲ ಸಂಪರ್ಕ ಸಾಧ್ಯವಾಗಿ ಸಲಿವೆ ಎಂದು ವಿವರಿಸಿದರು.
 
ದಕ್ಷಿಣ ಭಾರತದಲ್ಲಿ ಎಲೆಕ್ಟ್ರಾನಿಕ್‌ ಉಪಕರಣಗಳ ಮಾರಾಟದಲ್ಲಿ ಹೆಸರು ಮಾಡಿರುವ ‘ಯುನಿವರ್ಸೆಲ್’ ಕಂಪೆನಿ ನಮ್ಮ ಟ್ಯಾಬ್ಲೆಟ್‌ಗಳ ಮಾರಾಟಕ್ಕೆ ನೆರವಾಗಲಿದೆ. ಅಂತರ್ಜಾಲ ಸಂಪರ್ಕಕ್ಕಾಗಿ ಬಿಎಸ್‌ಎನ್‌ಎಲ್  ಜತೆ ಮೈತ್ರಿ ಸಾಧಿಸಲಾಗಿದೆ ಎಂದು ಟುಲಿ ವಿವರಿಸಿದರು.
 
‘ಯುನಿವರ್ಸೆಲ್‌’ನ ಸಂಸ್ಥಾಪಕ ಸತೀಶ್‌ ಬಾಬು ಮತ್ತು ‘ಬಿಎಸ್‌ಎನ್‌ಎಲ್‌’ ಕರ್ನಾಟಕ ವೃತ್ತದ ‘ಸಿಜಿಎಂ’ ಆರ್‌.ಕೆ.ಮಿಶ್ರಾ ಡೇಟಾವಿಂಡ್‌ ಜತೆಗಿನ ಮೈತ್ರಿಗೆ ಹರ್ಷ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ