ಜೇಬಿನಲ್ಲಿರುವ 500 ರೂ ಮತ್ತು ಹಳೆಯ ಜೀಪ್ ಮಾತ್ರ ನನ್ನ ಆಸ್ತಿ: ಕೇಜ್ರಿವಾಲ್

ಬುಧವಾರ, 23 ಏಪ್ರಿಲ್ 2014 (13:20 IST)
ಬಿಳಿ ಬಣ್ಣದ ಅರ್ಧ ತೋಳಿನ ಶರ್ಟ್ ಮತ್ತು ಆಮ್ ಆದ್ಮಿ ಟೋಪಿ ಧರಿಸಿದ್ದ ಅರವಿಂದ್ ಕೇಜ್ರಿವಾಲ್, ತಮ್ಮ ಪಕ್ಷದ ಉನ್ನತ ನಾಯಕರು ಹಾಗೂ ಪೋಷಕರೊಂದಿಗೆ  ಸುತ್ತುವರೆಯಲ್ಪಟ್ಟು, ಉತ್ತರಪ್ರದೇಶದ ವಾರಣಾಸಿಯಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು.
 
ಈ ಸಾರ್ವತ್ರಿಕ ಚುನಾವಣೆ ತಮ್ಮ ಮತ್ತು ಮೋದಿ ನಡುವಿನ, ಅತ್ಯಂತ ಆಳವಾಗಿ ವೀಕ್ಷಿಸಲ್ಪಡುವ ಸ್ಪರ್ಧೆ, ನನ್ನ "ಜೀವನದ ನಿರ್ಣಾಯಕ ಹೋರಾಟ" ಎಂದು ಆಪ್ ನಾಯಕ ಹೇಳಿದ್ದಾರೆ. 
"ನರೇಂದ್ರ ಮೋದಿ ಸಹ ನಾಳೆ ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ. ಹೆಲಿಕಾಪ್ಟರ್ ಮೂಲಕ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಆಗಮಿಸಲಿರುವ ಅವರು  ಹೆಲಿಕಾಪ್ಟರ್ ಮೂಲಕ ಮತ್ತೆ ಹಿಂತಿರುಗಲಿದ್ದಾರೆ. ಆದರೆ ನನ್ನ ಬಳಿ ಒಂದು ಹಳೆಯ ಜೀಪ್ ಇದೆ ಮತ್ತು ಜೇಬಿನಲ್ಲಿ 500 ರೂಪಾಯಿ ಮಾತ್ರ ಇದೆ" ಎಂದ ಕೇಜ್ರಿವಾಲ್ ತಮ್ಮ ಮತ್ತು ಮೋದಿ ಪ್ರಚಾರ ವೆಚ್ಚದಲ್ಲಿರುವ ಅಜಗಜಾಂತರವನ್ನು ಜನರ ಮುಂದಿಡಲು ಪ್ರಯತ್ನಿಸಿದರು. 
 
ನೂರಾರು ಆಪ್ ಸ್ವಯಂಸೇವಕರು  ಮನೆ ಮನೆ ಪ್ರಚಾರ ಮಾಡುವುದರ ಮೂಲಕ ಬಿಜೆಪಿಯ  ಆಕ್ರಮಣಕಾರಿಯಾಗಿ ಪ್ರಚಾರಕ್ಕೆ ಸವಾಲೆಸೆಯುತ್ತಿದ್ದಾರೆ. 
 
2009 ರ ಲೋಕಸಭಾ ಚುನಾವಣೆಯಲ್ಲಿ, ಹಿರಿಯ ಬಿಜೆಪಿ ನಾಯಕ ಮುರಳಿ ಮನೋಹರ್ ಜೋಷಿ 17,000 ಮತಗಳ ತುಸು ಅಂತರದಿಂದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಬಿಎಸ್ಪಿಯ ಮುಖ್ತಾರ್ ಅನ್ಸಾರಿಯವರ ವಿರುದ್ಧ  ಗೆಲುವನ್ನು ಸಾಧಿಸಿದ್ದರು. 
 
ಈಗ ಕ್ಯುಮಿ ಏಕ್ತಾ ದಳದ ಮುಖ್ಯಸ್ಥರಾದ ಅನ್ಸಾರಿ ವಾರಣಾಸಿಯಲ್ಲಿನ 1.5 ಲಕ್ಷ ಮುಸ್ಲಿಂ ಮತದಾರರ ಬಲವಾದ ಬೆಂಬಲವನ್ನು ಹೊಂದಿದ್ದಾರೆ, ಜಾತ್ಯತೀತ ಮತಗಳ ವಿಭಜನೆಯನ್ನು ತಪ್ಪಿಸಲು ಅವರು ಕಳೆದ ವಾರ ಸ್ಪರ್ಧೆಯಿಂದ ನಿರ್ಗಮಿಸಿದ್ದರು.
 
ಕಾಂಗ್ರೆಸ್ ಸ್ಥಳೀಯ ಶಾಸಕ ಅಜಯ್ ರೈರವರನ್ನು ಕಣಕ್ಕಿಳಿಸಿದರೆ. ಸಮಾಜವಾದಿ ಪಕ್ಷ, ಬಿಎಸ್ಪಿ ಮತ್ತು ತೃಣಮೂಲ ಕಾಂಗ್ರೆಸ್ ಕೂಡ ತಮ್ಮ ಅಭ್ಯರ್ಥಿಗಳನ್ನು ಆಖಾಡಕ್ಕಿಳಿಸಿವೆ. ಮೇ 12ರಂದು ಇಲ್ಲಿ ಮತದಾನ ನಡೆಯಲಿದೆ.

ವೆಬ್ದುನಿಯಾವನ್ನು ಓದಿ