ಜಮ್ಮು ಕಾಶ್ಮಿರದಲ್ಲಿ ಸರಕಾರ ರಚನೆ ಪಿಡಿಪಿ ಪಕ್ಷದ ನಿರ್ಧಾರಕ್ಕೆ ಬಿಟ್ಟಿದ್ದು: ಆರೆಸ್ಸೆಸ್

ಬುಧವಾರ, 2 ಮಾರ್ಚ್ 2016 (16:12 IST)
ಜಮ್ಮು ಕಾಶ್ಮಿರದಲ್ಲಿ ಸರಕಾರ ರಚಿಸುವ ಕುರಿತಂತೆ ಅಂತಿಮ ನಿರ್ಧಾರ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿಯವರ ಕೈಯಲ್ಲಿದೆ ಎಂದು ಆರೆಸ್ಸೆಸ್ ಮುಖಂಡರು ತಿಳಿಸಿದ್ದಾರೆ.
 
ಕಳೆದ ಜನೆವರಿ 7 ರಂದು ಮಾಜಿ ಮುಖ್ಯಮಂತ್ರಿ ದಿವಂಗತ ಮುಫ್ತಿ ಮೊಹಮ್ಮದ್ ಸಯೀದ್ ನಿಧನದ ನಂತರ ಪಿಡಿಪಿ ಮತ್ತು ಬಿಜೆಪಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಬಿರುಕು ಉಂಟಾಗಿ ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆ ಎದುರಾಗಿದೆ.
  
ಆರೆಸ್ಸೆಸ್ ಹಿರಿಯ ನಾಯಕ ಇಂದ್ರೇಶ್ ಕುಮಾರ್, ಉಭಯ ಪಕ್ಷಗಳು ಪರಸ್ಪರ ವಿಚಾರಧಾರೆಗಳಲ್ಲಿ ನಂಬಿಕೆಯಿಡುವುದು ಅಗತ್ಯವಾಗಿದೆ. ಪಾಕಿಸ್ತಾನದೊಂದಿಗಿನ ಸಂಬಂಧ ಕುರಿತಂತೆ ಕೇಂದ್ರ ಸರಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆಯೇ ಹೊರತು ಯಾವುದೇ ರಾಜ್ಯ ಕೇಂದ್ರದ ಮೇಲೆ ಒತ್ತಡ ಹೇರುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
 
ನಂಬಿಕೆಯಿಂದ ನಂಬಿಕೆಯನ್ನು ಗೆಲ್ಲಬಹುದಾಗಿದೆ. ಪಿಡಿಪಿ ಮತ್ತು ಇತರ ಪಕ್ಷಗಳು ಜಮ್ಮು ಕಾಶ್ಮಿರದ ಜನತೆಯಲ್ಲಿ ನಂಬಿಕೆ ಮೂಡಿಸುವುದು ಅಗತ್ಯವಾಗಿದೆ ಎಂದು ಕುಮಾರ್ ತಿಳಿಸಿದ್ದಾರೆ.
 
ಜಮ್ಮು ಕಾಶ್ಮಿರದಲ್ಲಿರುವ ಸರಕಾರ ಪಾಕಿಸ್ತಾನ ಮತ್ತು ಪಾಕಿಸ್ತಾನದ ಧ್ವಜ ವಿವಾದಗಳೊಂದಿಗೆ ದೂರವಿರಬೇಕಾಗಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಅಡಳಿತ ಜಾರಿಯಲ್ಲಿರುವುದರಿಂದ ಆದಷ್ಟು ಬೇಗ ಜನತೆಯಿಂದ ಆಯ್ಕೆಯಾದ ಸರಕಾರ ಅಧಿಕಾರದ ಗದ್ದುಗೆ ಹಿಡಿಯಬೇಕಾಗಿದೆ ಎಂದು ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ