ಪಶ್ಚಿಮ ಬಂಗಾಳದಲ್ಲಿ ಮತ್ತೆ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ : ಚುನಾವಣಾ ಪೂರ್ವ ಸಮೀಕ್ಷೆ

ಶುಕ್ರವಾರ, 1 ಏಪ್ರಿಲ್ 2016 (20:37 IST)
ಪ್ರಸಕ್ತ ವರ್ಷದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳ ಚುನಾವಣಾ ಪೂರ್ವ ಸಮೀಕ್ಷೆಗಳು ಇಂದಿನಿಂದ ಲಭ್ಯವಾಗುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಮತ್ತೆ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಜಯ ದೊರೆಯಲಿದೆ.
 
ಇಂಡಿಯಾ ಸಿ-ವೋಟರ್ ಸಮೀಕ್ಷೆಯ ಪ್ರಕಾರ,ಕಳೆದ 2011ಕ್ಕೆ ಹೋಲಿಸಿದಲ್ಲಿ ಎಡಪಕ್ಷಗಳಿಗೆ ದೊರೆಯಲಿರುವ ಮತಗಳ ಶೇಕಡಾವಾರು ಪ್ರಮಾಣದಲ್ಲಿ ಹೆಚ್ಚಳವಾಗಿದ್ದರೂ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ.
 
ಕಾಂಗ್ರೆಸ್ ಪಕ್ಷದೊಂದಿಗಿನ ಮೈತ್ರಿಯಿಂದ ಎಡಪಕ್ಷಗಳಿಗೆ ಹೆಚ್ಚಿನ ಲಾಭವಾಗುವುದಿಲ್ಲ ಎನ್ನುವ ಅಂಶ ಸಮೀಕ್ಷಾ ವರದಿಯಲ್ಲಿ ಬಹಿರಂಗವಾಗಲಿದೆ. 
 
ತೃಣಮೂಲ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಶೇ.40 ರಷ್ಟು ಮತಗಳನ್ನು ಪಡೆಯಲಿದ್ದು, ಎಡಪಕ್ಷಗಳು ಶೇ.31 ರಷ್ಟು ಮತಗಳು ಪಡೆಯಲಿವೆ. ಬಿಜೆಪಿಗೆ ಕೇವಲ 4 ಸೀಟುಗಳು ಲಭ್ಯವಾಗುವ ನಿರೀಕ್ಷೆಗಳಿವೆ.
 
ಇಂಡಿಯಾ ಟಿವಿ- ಸಿ-ವೋಟರ್ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಗೆಲ್ಲುವ ಸೀಟುಗಳ ಅಂಕಿ ಅಂಶಗಳು ಇಲ್ಲಿವೆ.
 
ತೃಣಮೂಲ ಕಾಂಗ್ರೆಸ್ -160 ಸ್ಥಾನ
 
ಎಡಪಕ್ಷಗಳು: 106+
 
ಕಾಂಗ್ರೆಸ್ : 21
 
ಬಿಜೆಪಿ: 4
 
ಇತರರು: 3 

ವೆಬ್ದುನಿಯಾವನ್ನು ಓದಿ