ಪಾಕಿಸ್ತಾನಕ್ಕೆ ಹೋದ್ರೂ ಮೋದಿಯನ್ನು ವಿರೋಧಿಸುವುದನ್ನು ನಿಲ್ಲಿಸುವುದಿಲ್ಲ : ಒಮರ್ ಅಬ್ದುಲ್ಲಾ

ಮಂಗಳವಾರ, 22 ಏಪ್ರಿಲ್ 2014 (13:01 IST)
ಮೋದಿಯನ್ನು ವಿರೋಧಿಸುವವರು 'ಪಾಕಿಸ್ತಾನ್ ಪರ ' ಒಲವನ್ನು ಹೊಂದಿರುವವರು ಎಂಬ ಬಿಜೆಪಿ ನಾಯಕ ಗಿರಿರಾಜ ಸಿಂಗ್ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, "ನಾನು ಪಾಕ್‌ಗೆ ಹೋಗಬೇಕಾದ ಪರಿಸ್ಥಿತಿ ಬಂದರೂ ಸಹ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿಯನ್ನು ವಿರೋಧಿಸುವುದನ್ನು ನಿಲ್ಲಿಸುವುದಿಲ್ಲ" ಎಂದು ಗುಡುಗಿದ್ದಾರೆ.
ಅನಂತನಾಗ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾತನಾಡುತ್ತಿದ್ದ ಅವರು "ಇಂದು ನಾವು ಬೆದರಿಕೆಯ ಮೇಲೆ ಬೆದರಿಕೆಯನ್ನು ಪಡೆಯುತ್ತಿದ್ದೇವೆ. ಅಲ್ಲಾನಿಗೆ ಧನ್ಯವಾದಗಳು. ನಾವು ಶ್ರೀನಗರ-ಮುಜಾಫರಾಬಾದ್ ಬಸ್ ಸೇವೆಯನ್ನು ಹೊಂದಿದ್ದೇವೆ. ಆದ್ದರಿಂದ, ನನಗೆ  ವಾಘಾ ಗಡಿ(ಪಾಕಿಸ್ತಾನ ಒಳಗೆ) ದಾಟಲು ದೆಹಲಿ ಅಥವಾ ಅಮೃತಸರಕ್ಕೆ ಹೋಗುವ ಅಗತ್ಯವಿಲ್ಲ. ನಾನು ಇಲ್ಲಿಂದ ಮುಜಾಫರಾಬಾದ್‌ಗೆ ಹೋಗಲು ಟಿಕೆಟ್ ಪಡೆಯುತ್ತೇನೆ ಏಕೆಂದರೆ ನಾನು ಮೋದಿಯನ್ನು ವಿರೋಧಿಸುವುದನ್ನು ನಿಲ್ಲಿಸುವುದಿಲ್ಲ " ಎಂದು ಹೇಳಿದ್ದಾರೆ. 
 
ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸೈಫ್ ಉದ್ದೀನ್ ಸೋಜ್ ಸಹ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. 
 
ಗಿರಿರಾಜ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಚುನಾವಣಾ ಆಯೋಗ ಪಾಟ್ಣಾ ಜಿಲ್ಲಾಡಳಿತಕ್ಕೆ ಆದೇಶ ನೀಡಿತ್ತು.
 
ಜಾರ್ಖಂಡ್‌ನಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಕೂಡ ತನ್ನ ಉದ್ರೇಕಕಾರಿ ಭಾಷಣವನ್ನು  ಪುನರಾವರ್ತಿತಿಸಿದ್ದ ಸಿಂಗ್ ವಿರುದ್ಧ ಭಾನುವಾರ ಕೇಸ್‌ನ್ನು ನೋಂದಾಯಿಸಲಾಗಿದೆ. 
 
ನರೇಂದ್ರ ಮೋದಿ ವಿರೋಧಿಗಳನ್ನು "ಪಾಕಿಸ್ತಾನ ಕಡೆಯವರು " ಎಂದಿದ್ದ ಸಿಂಗ್ ಮೋದಿಯನ್ನು ವಿರೋಧಿಸುವವರು ಪಾಕಿಸ್ತಾನದ ಕಡೆ ನೋಡುತ್ತಿದ್ದಾರೆ, ಮತ್ತು ಅಂತವರಿಗೆ ಪಾಕಿಸ್ತಾನದಲ್ಲಿ ಜಾಗವಿದೆ, ಭಾರತದಲ್ಲಿಲ್ಲ" ಎಂದು ಹೇಳಿದ್ದರು.  
 

ವೆಬ್ದುನಿಯಾವನ್ನು ಓದಿ