ಸಿಎಂ ಕೇಜ್ರಿವಾಲ್ ರಾಜೀನಾಮೆಗೆ ಹೆಚ್ಚಿದ ಒತ್ತಾಯ

ಸೋಮವಾರ, 8 ಮೇ 2017 (08:48 IST)
ನವದೆಹಲಿ: 2 ಕೋಟಿ ರೂ. ಲಂಚ ಸ್ವೀಕಾರಿಸಿದ್ದಾರೆಂಬ ಆರೋಪಕ್ಕೆ ಸಿಲುಕಿಕೊಂಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರಾಜೀನಾಮೆಗೆ ಒತ್ತಾಯ ಹೆಚ್ಚುತ್ತಿದೆ.

 
ಎಎಪಿಯಿಂದ ವಜಾಗೊಂಡಿದ್ದ ಸಚಿವ ಕಪಿಲ್ ಮಿಶ್ರಾ ಸಿಎಂ ಕೇಜ್ರಿವಾಲ್ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಬಳಿಯಿಂದ 2 ಕೋಟಿ ರೂ. ಹಣ ಪಡೆಯುತ್ತಿರುವುದನ್ನು ತಾನೇ ನೋಡಿದ್ದೇನೆ ಎಂದು ಆರೋಪಿಸಿದ್ದರು.

ಈ ವಿಷಯ ದೆಹಲಿ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದು, ಭ್ರಷ್ಟಾಚಾರ ನಿರ್ಮೂಲನೆ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಕೇಜ್ರಿವಾಲ್ ಮೇಲೆ ಭಾರೀ ಟೀಕೆಗಳಾಗುತ್ತಿವೆ. ಅಲ್ಲದೆ ಬಿಜೆಪಿ ಸಿಎಂ ರಾಜೀನಾಮೆಗೆ ಒತ್ತಾಯಿಸಿದೆ.

ಇನ್ನೊಂದು ಪಕ್ಷ ಕಾಂಗ್ರೆಸ್ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಲಿ ಎಂದಿದೆ. ಆದರೆ ಎಎಪಿ ನಾಯಕರು ಮಾತ್ರ ತಮ್ಮ ನೇತಾರನ ಬೆನ್ನಿಗೆ ನಿಂತಿದ್ದಾರೆ. ಕೇಜ್ರಿವಾಲ್ ಇಂತಹ ಕೆಲಸವನ್ನು ಕನಸಿನಲ್ಲೂ ಮಾಡಲಾರರು ಎಂದೇ ಹೇಳಿಕೊಂಡು ಬರುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ