ಪ್ರೀಮಿಯರ್ ರೈಲುಗಳ ಪ್ರಯಾಣ ದರ ಏರಿಕೆಗೆ ಪ್ರತಿಪಕ್ಷದ ವಾಗ್ದಾಳಿ

ಶುಕ್ರವಾರ, 9 ಸೆಪ್ಟಂಬರ್ 2016 (19:43 IST)
ಪ್ರೀಮಿಯರ್ ರೈಲುಗಳಲ್ಲಿ ರೈಲ್ವೆ ಪ್ರಯಾಣ ದರಗಳನ್ನು ಏರಿಸಿದ ಕ್ರಮಕ್ಕೆ ಕಾಂಗ್ರೆಸ್, ಎಎಪಿ ಮತ್ತು ಸಿಪಿಎಂ ತರಾಟೆಗೆ ತೆಗೆದುಕೊಂಡಿದ್ದು, ದರಗಳನ್ನು ಇಳಿಸುವಂತೆ ಒತ್ತಾಯಿಸಿದೆ.  ಸರ್ಕಾರದ ನಿರ್ಧಾರವನ್ನು ತುಘಲಕ್ ಫರ್ಮಾನ್ ಎಂದು ಕಾಂಗ್ರೆಸ್ ಬಣ್ಣಿಸಿದೆ. ಸರ್ಕಾರದ ಶ್ರೀಮಂತ ಪರ ಪಕ್ಷಪಾತವನ್ನು ಇದು ತೋರಿಸುತ್ತದೆ ಎಂದು ಸಿಪಿಎಂ ದೂರಿದೆ.
 
ಡುರುಂಟೊ, ಶತಾಬ್ದಿ ಮತ್ತು ರಾಜಧಾನಿ ರೈಲುಗಳಲ್ಲಿ ದರ ಹೆಚ್ಚಳವನ್ನು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಕೂಡ ಖಂಡಿಸಿದ್ದಾರೆ. 
ಸರ್ಕಾರ ಬುಧವಾರ ಬದಲಾಗುವ ದರಗಳೆಂದು ಪರಿಗಣಿಸಿ ಡುರಂತೊ, ಶತಾಬ್ದಿ ಮತ್ತು ರಾಜಧಾನಿ ರೈಲುಗಳ ಮೂಲದರಗಳು ಪ್ರತಿ ಶೇ. 10ರಷ್ಟು ಸೀಟುಗಳ ಮಾರಾಟಕ್ಕೆ  ಶೇ. 10ರಷ್ಟು ಹೆಚ್ಚಳವಾಗುತ್ತದೆಂದು ಪ್ರಕಟಿಸಿದೆ.  ನಿಗದಿತ ಸೀಲಿಂಗ್ ಮಿತಿವರೆಗೆ ಮಾತ್ರ ದರ ಏರಿಕೆ ಅನ್ವಯಿಸುತ್ತದೆ.
 
ಅವಶ್ಯಕ ವಸ್ತುಗಳ ದರ ಏರಿಕೆ,ಆಹಾರ ಹಣದುಬ್ಬರದ ನಡುವೆ ರಾಜಧಾನಿ, ದುರಂತೊ ಮತ್ತು ಶತಾಬ್ದಿಯಲ್ಲಿ ಬದಲಾದ ದರ ಪದ್ಧತಿ ಮೂಲಕ ಬೆಲೆ ಏರಿಕೆ ಮಾಡಿದ್ದು ಜನಸಾಮಾನ್ಯರಿಗೆ ಆಘಾತಕಾರಿಯಾಗಿದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ತಿಳಿಸಿದರು. 

ವೆಬ್ದುನಿಯಾವನ್ನು ಓದಿ