ಅಸಹಿಷ್ಣುತೆ: ಸಂಸತ್ತಿನಲ್ಲಿ ಸರಕಾರದ ತರಾಟೆಗೆ ವಿಪಕ್ಷಗಳ ರಣತಂತ್ರ

ಬುಧವಾರ, 25 ನವೆಂಬರ್ 2015 (16:25 IST)
ಚಳಿಗಾಲದ ಅಧಿವೇಶನದಲ್ಲಿ ಅಸಹಿಷ್ಣುತೆ ವಿಷಯವನ್ನು ಕೈಗೆತ್ತಿಕೊಂಡು ಕೇಂದ್ರ ಸರಕಾರವನ್ನು ಮೂಲೆಗುಂಪು ಮಾಡಲು ವಿಪಕ್ಷಗಳು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.
 
ಜಿಎಸ್‌ಟಿ ಮಸೂದೆಗೆ ಅಂಗೀಕಾರ ಪಡೆಯುವ ತುರಾತುರಿ ಹೊಂದಿರುವ ಕೇಂದ್ರ ಸರಕಾರ, ಎಲ್ಲಾ ವಿಷಯಗಳ ಬಗ್ಗೆ ಚರ್ಚೆಗೆ ಸಿದ್ದವಿದೆ ಎಂದು ಸ್ಪಷ್ಟಪಡಿಸಿದೆ.
 
ಮೋದಿ ಸಂಪುಟದ ಕೆಲ ಹಿರಿಯ ಸಚಿವರು ಸಭೆ ಸೇರಿ, ದಾದ್ರಿ ಹತ್ಯೆ, ಎಂಎಂ.ಕಲಬುರ್ಗಿ ಹತ್ಯೆ ಕುರಿತಂತೆ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವ ಆರೋಪಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
 
ಕಾಂಗ್ರೆಸ್, ಜೆಡಿಯು ಮತ್ತು ಸಿಪಿಐ(ಎಂ) ಪಕ್ಷಗಳು ಸದನದಲ್ಲಿ ಅಸಹಿಷ್ಣುತೆ ಬಗ್ಗೆ ಚರ್ಚೆ ನಡೆಸಲು ಸಭಾಪತಿಯವರಿಗೆ ಅವಕಾಶ ನೀಡುವಂತೆ ಮನವಿ ಮಾಡಿದೆ. ಜಿಎಸ್‌ಟಿ ಮಸೂದೆ ಬಗೆಗಿರುವ ಲೋಪದೋಷಗಳ ಬಗ್ಗೆ ಚರ್ಚಿಸಲಾಗುವುದು ಎಂದು ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ.  
 
ಅಧಿವೇಶನದಲ್ಲಿ ಕೇಂದ್ರ ಸಚಿವ ವಿ.ಕೆ.ಸಿಂಗ್ ಅವರ ನಾಯಿ ಹೇಳಿಕೆ ಮತ್ತು ಹರಿಯಾಣಾದಲ್ಲಿ ದಲಿತ ಕುಟುಂಬದ ಇಬ್ಬರು ಮಕ್ಕಳ ಹತ್ಯೆ ಕೂಡಾ ಸರಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
 
ಜಿಎಸ್‌ಟಿ ಮಸೂದೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿದಲ್ಲಿ ಕಾಂಗ್ರೆಸ್ ಪಕ್ಷ ಜಿಎಸ್‌ಟಿ ಮಸೂದೆಯನ್ನು ಬೆಂಬಲಿಸಲು ಸಿದ್ದವಿದೆ ಎಂದು ಕಾಂಗ್ರೆಸ್ ವಕ್ತಾರ ರಶೀದ್ ಅಳ್ವಿ ತಿಳಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ