ಒಬಾಮಾ ಭೇಟಿ: ಭಾರತದ ಗಡಿಯತ್ತ ಗುಂಡಿನ ದಾಳಿ ನಡೆಸಿದ ಪಾಕ್ ಸೈನಿಕರು

ಭಾನುವಾರ, 25 ಜನವರಿ 2015 (14:53 IST)
ಪಾಕಿಸ್ತಾನದ ಸೈನಿಕರು ಮತ್ತೆ ಕದನ ವಿರಾಮ ಉಲ್ಲಂಘಿಸಿದ್ದು. ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಬರುವುದಕ್ಕೂ ಕೆಲವು ಗಂಟೆಗಳ ಹಿಂದಷ್ಟೇ ಗುಂಡಿನ ಚಕಮಕಿ ನಡೆಸಿ ಗಡಿಯಿಂದ ಒಳನುಸುಳಲು ಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಜಮ್ಮು ಮತ್ತು ಕಾಶ್ಮೀರದ ಜೊಗ್ವಾನ್‌ನ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಪಡೆಗಳು ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ. ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನ ಯೋಧರು ಇಂದು ಬೆಳಗ್ಗೆ ಮತ್ತೆ ಗುಂಡಿನ ಮಳೆ ಪ್ರಾರಂಭಿಸಿದ್ದಾರೆ. ಬೆಳಿಗ್ಗೆ 1 ಗಂಟೆಯಿಂದ ಗುಂಡಿನ ದಾಳಿ ನಡೆಸಿದ್ದರು. ಒಬಾಮ ಬರುವುದಕ್ಕೂ ಕೆಲವು ಗಂಟೆಗಳ ಹಿಂದಷ್ಟೇ ಮತ್ತೆ ಸಣ್ಣ ಮಟ್ಟದಲ್ಲಿ ಗುಂಡಿನ ದಾಳಿ ನಡೆಸಿ ಒಳನುಸುಳಲು ಯತ್ನಿಸಿದ್ದಾರೆ.
 
ಬೆಳಿಗ್ಗೆ 1 ಗಂಟೆ ಸುಮಾರಿಗೆ ಪಾಕ್ ಸೇನಾ ಪಡೆಯಿಂದ ಗುಂಡಿನ ದಾಳಿ ಪ್ರಾರಂಭವಾಯಿತು. ತದನಂತರ ಭಾರತೀಯ ಸೇನಾ ಪಡೆ ಪಾಕ್ ದಾಳಿಗೆ ದಿಟ್ಟ ಉತ್ತರ ನೀಡಿತ್ತು. ಘಟನೆ ವೇಳೆ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ ಹಾಗೂ ಯಾರೊಬ್ಬರಿಗು ಗಾಯಗಳಾಗಿಲ್ಲ ಎಂದು ಸೇನಾ ಮುಖ್ಯಸ್ಥರೊಬ್ಬರು ಹೇಳಿದ್ದಾರೆ

ವೆಬ್ದುನಿಯಾವನ್ನು ಓದಿ