ಪಾಕ್‌ನಿಂದ 61 ಭಾರತೀಯ ಮೀನುಗಾರರ ಬಂಧನ

ಶುಕ್ರವಾರ, 21 ನವೆಂಬರ್ 2014 (11:45 IST)
11 ಹಡಗುಗಳಲ್ಲಿದ್ದ ಅರವತ್ತೊಂದು ಮಂದಿ ಭಾರತೀಯ ಮೀನುಗಾರರನ್ನು ಪಾಕಿಸ್ತಾನದ ಕಡಲ ಭದ್ರತಾ ಸಂಸ್ಥೆಯವರು ಬಂಧಿಸಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ವಿದೇಶೀ ಕಾಯಿದೆ ಮತ್ತಪ ಮೀನುಗಾರಿಕಾ ಕಾಯಿದೆಯ ಪ್ರಕಾರ ಮೀನುಗಾರರ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. 
 
ಭೂಗೋಳಿಕ ಮಿತಿ ಉಲ್ಲಂಘನೆ ಕಾರಣಕ್ಕೆ ಎರಡು ದೇಶಗಳ ಮೀನುಗಾರರು  ಬಂಧಿಸಲ್ಪಡುವುದು ಸಾಮಾನ್ಯವಾಗಿ ಬಿಟ್ಟಿದೆ.

ವೆಬ್ದುನಿಯಾವನ್ನು ಓದಿ