36 ಭಾರತೀಯ ಕೈದಿಗಳನ್ನು ಬಿಡುಗಡೆ ಮಾಡಿದ ಪಾಕಿಸ್ತಾನ್

ಶುಕ್ರವಾರ, 28 ನವೆಂಬರ್ 2014 (13:21 IST)
ಕರಾಚಿ ಜಿಲ್ಲೆಯ ಮಲೀರ್ ಕಾರಾಗೃಹದಲ್ಲಿ ಬಂಧಿಯಾಗಿದ್ದ 36 ಭಾರತೀಯ ಪ್ರಜೆಗಳನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ.
35 ಮೀನುಗಾರರು ಮತ್ತು ಒಬ್ಬ ನಾಗರಿಕನನ್ನು ಶಿಕ್ಷಾ ಅವಧಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಪಾಕಿಸ್ತಾನದ ಪತ್ರಿಕೆಯೊಂದು ವರದಿ ಮಾಡಿದೆ. 
 
ಕೈದಿಗಳು ಲಾಹೋರ್ ಬಳಿಯಲ್ಲಿನ ವಾಘಾ ಗಡಿಯ ಚೆಕ್ ಪೋಸ್ಟ್ ಮೂಲಕ ಭಾರತಕ್ಕೆ ವಾಪಾಸ್ಸಾಲಿದ್ದಾರೆ.
 
ಬಿಡುಗಡೆಯಾಗಿರುವುದಕ್ಕೆ ಅತೀವ ಸಂತೋಷ ವ್ಯಕ್ತಪಡಿಸಿರುವ ಕೈದಿಗಳು ತಮ್ಮ ಪ್ರೀತಿಪಾತ್ರರನ್ನು ಕಾಣಲು ತವಕದಿಂದಾಗಿರುವುದಾಗಿ ಹೇಳಿದ್ದಾರೆ. 
 
ಜೈಲಿನಲ್ಲಿ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಾಯಿತು ಎಂದು ಅವರು  ತಿಳಿಸಿದ್ದಾರೆ. 
 
ಪ್ರಸ್ತುತ ಕನಿಷ್ಠ 419 ಭಾರತೀಯ ಮೀನುಗಾರರು ಕರಾಚಿಯ ಮಾಲೀರ್ ಜೈಲಿನಲ್ಲಿ ಸಜೆ ಸವೆಸುತ್ತಿದ್ದಾರೆ. 
 
ಅರಬ್ಬಿ ಸಮುದ್ರದಲ್ಲಿ ಸಮುದ್ರ ಗಡಿಯನ್ನು ನಿಖರವಾಗಿ ವ್ಯಾಖ್ಯಾನಿಸಲಾಗಿಲ್ಲದ ಕಾರಣ ಮತ್ತು ಮೀನುಗಾರಿಕಾ ಬೋಟ್‌ಗಳು ಗಡಿ ಸ್ಥಳವನ್ನು  ಗುರುತಿಸುವಂತ ತಂತ್ರಜ್ಞಾನದಲ್ಲಿ ಕೊರತೆ ಇರುವ ಕಾರಣ ಎರಡು ದೇಶಗಳ ನಡುವಿನ ಮೀನುಗಾರರು ಗಡಿ ನಿಯಮ ಉಲ್ಲಂಘನೆಯಾಗುವ ಸಂಬಂಧ ಬಂಧಿಸಲ್ಪಡುವುದು ಸಾಮಾನ್ಯ ಸಂಗತಿಯಾಗಿದೆ. 
 
ಎರಡು ದೇಶಗಳ ನಡುವಿನ ವೈರತ್ವದ ಕಾರಣದಿಂದ ರಾಜತಾಂತ್ರಿಕ ಸಂಬಂಧದಲ್ಲಿ ಸುಧಾರಣೆಯಾಗುತ್ತಿಲ್ಲ. ಈ ಕಾರಣದಿಂದ  ಕೆಲವು ಸರಕಾರಿ ಅವಶ್ಯಕತೆಗಳನ್ನು ಪೂರ್ಣಗೊಳಿಸುವಲ್ಲಿ ವಿಳಂಬವಾಗುತ್ತದೆ. ಆದ್ದರಿಂದ  ತಮ್ಮ ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸಿದ ನಂತರವೂ ಕೂಡ ಬಂಧಿತ ಮೀನುಗಾರರು ಜೈಲಿನಲ್ಲಿ ಕೊಳೆಯುವುದು ಸಾಮಾನ್ಯವಾಗಿದೆ. 

ವೆಬ್ದುನಿಯಾವನ್ನು ಓದಿ