ಭಾರತೀಯ ಟಿವಿ, ರೇಡಿಯೋ ಮೇಲೆ ಪಾಕ್ ನಿರ್ಬಂಧ ದುರದೃಷ್ಟಕರ

ಶುಕ್ರವಾರ, 21 ಅಕ್ಟೋಬರ್ 2016 (14:56 IST)
ಭಾರತೀಯ ಟಿವಿ, ರೇಡಿಯೋ ಕಾರ್ಯಕ್ರಮಗಳ ಮೇಲೆ ಪಾಕ್ ನಿರ್ಬಂಧ ದುರದೃಷ್ಟಕರ ಎಂದು ಭಾರತ ಹೇಳಿದ್ದು ಇದು ನೆರೆಯ ದೇಶಕ್ಕೆ ಆತ್ಮವಿಶ್ವಾಸದ ಕೊರತೆ ಇದೆ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದಿದೆ. 

 
ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್, ಪಾಕಿಸ್ತಾನಕ್ಕೆ ಆತ್ಮವಿಶ್ವಾಸದ ಕೊರತೆ ಇದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಇದು ದುರದೃಷ್ಟಕರ ಬೆಳವಣಿಗೆ ಎಂದು 
ಹೇಳಿದ್ದಾರೆ.
 
ಪಾಕ್ ಕಲಾವಿದರ ಮೇಲೆ ಭಾರತ ನಿಷೇಧ ಹೇರುವುದಿಲ್ಲ ಎಂದು ಸ್ವರೂಪ್ ಸ್ಪಷ್ಟ ಪಡಿಸಿದ್ದಾರೆ. 
 
ಇಂದು 3 ಗಂಟೆಯಿಂದ ಜಾರಿಗೆ ಬರುವಂತೆ ಪಾಕಿಸ್ತಾನದಲ್ಲಿ ಎಲ್ಲಾ ಟಿವಿ ಹಾಗೂ ರೇಡಿಯೋಗಳನ್ನು ನಿಷೇಧಿಸಲಾಗಿದೆ. ಸರ್ಕಾರದ ಮನವಿ ಮೇರೆಗೆ ಪಾಕ್ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಒಕ್ಕೂಟ ಈ ಆದೇಶ ಹೊರಡಿಸಿದೆ.
 
ನಿಷೇಧವನ್ನು ಉಲ್ಲಂಘಿಸಿ ಯಾವುದಾದರೂ ವಾಹಿನಿ ಪ್ರಸಾರ ಮಾಡಿದರೆ ಅದರ ಸಂಬಂಧಪಟ್ಟವರ ಪರವಾನಿಗೆಯನ್ನು ಅಮಾನತುಗೊಳಿಸಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ