ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ

ಭಾನುವಾರ, 16 ಅಕ್ಟೋಬರ್ 2016 (11:14 IST)
ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬಳಿಕ ಗಡಿಯಲ್ಲಿ ಪಾಕ್ ಉಪಟಳ ಮತ್ತಷ್ಟು ಹೆಚ್ಚಿದೆ. ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನ ಇಂದು ಸಹ ನೌಶೆರಾ ಸೆಕ್ಟರ್‌ನಲ್ಲಿ ನಾಲ್ಕು ಸೇನಾ ನೆಲೆಗಳ ಮೇಲೆ ಗುಂಡಿನ ಸುರಿಮಳೆಗರಿಯುತ್ತಿದೆ. 
 
ಪಾಕ್ ಪ್ರಚೋದನೆಗೆ ಭಾರತೀಯ ಸೈನಿಕರು ತಕ್ಕ ಪ್ರತ್ಯುತ್ತರವನ್ನು ನೀಡುತ್ತಿದ್ದು, ಈವರೆಗೆ ಯಾವುದೇ ಸಾವು ನೋವಿನ ವರದಿಯಾಗಿಲ್ಲ. 
 
ಉರಿ ಸೇನಾನೆಲೆಯ ಮೇಲೆ ಪಾಕ್ ಪೋಷಿತ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೀಮಿತ ದಾಳಿಯನ್ನು ಕೈಗೊಂಡ ಬಳಿಕ ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಮತ್ತೆ ಮತ್ತೆ ಕದನವಿರಾಮವನ್ನು ಉಲ್ಲಂಘಿಸುತ್ತಿದೆ. ಜತೆಗೆ ಉಗ್ರ ಸಂಘಟನೆಗಳು ಸಹ ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನೆಸಗಲು ಪ್ರಯತ್ನ ನಡೆಸುತ್ತಿವೆ.
 
ಇನ್ನೊಂದೆಡೆ ದೇಶದ ಭದ್ರತೆಗೆ ಅಪಾಯ ಎದುರಾದರೆ ಮತ್ತಷ್ಟು ಸೀಮಿತ ದಾಳಿಗಳನ್ನು ಕೈಗೊಳ್ಳುವುದಾಗಿ ಭಾರತೀಯ ಸೇನೆ ಸ್ಪಷ್ಟ ಪಡಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ