ಭಾರತೀಯ ಸೇನೆ ನಡೆಸಿದ್ದ ಸೀಮಿತ ದಾಳಿಯಿಂದ ನಲುಗಿ ಹೋಗಿದ್ದ ಪಾಕಿಸ್ತಾನಕ್ಕೆ ಮಾಸ್ಟರ್ ಸ್ಟ್ರೋಕ್ ಮೂಲಕ ಪ್ರಧಾನಿ ಮೋದಿ ಮತ್ತೊಂದು ಆಘಾತವನ್ನು ನೀಡಿದ್ದಾರೆ. 500 ಮತ್ತು 1,000ರೂಪಾಯಿಗಳ ಮೇಲೆ ನಿಷೇಧ ಹೇರಿರುವುದಿಂದ ಪಾಕಿಸ್ತಾನದಲ್ಲಿ ಮುದ್ರಣಗೊಂಡು ಉಗ್ರರಿಗೆ ಪೂರೈಸಲಾಗುತ್ತಿದ್ದ ನಕಲಿ ನೋಟಿನ ದಂಧೆಗೆ ಸಂಪೂರ್ಣವಾಗಿ ಕಡಿವಾಣ ಹಾಕಿದಂತಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಹೊಸದಾಗಿ ಜಾರಿಗೆ ತಂದಿರುವ 500 ಮತ್ತು 1,000ರೂಪಾಯಿಗಳನ್ನು ಪಾಕಿಸ್ತಾನ ಸೇರಿದಂತೆ ಯಾರು ಕೂಡ ನಕಲು ಮಾಡುವುದು ಕಷ್ಟ. ನಾವಿದನ್ನು ಸತತ 6 ತಿಂಗಳಿಂದ ಪರಿಶೀಲಿಸಲಿದ್ದೇವೆ ಎಂದಿರುವ ಗುಪ್ತಚರ ಇಲಾಖೆ ಈ ನೋಟಿನಲ್ಲಿ ಅಂತಹ ವಿಶೇಷತೆ ಏನಿದೆ ಎಂಬುದನ್ನು ಮಾತ್ರ ಬಹಿರಂಗ ಪಡಿಸಲು ನಿರಾಕರಿಸಿದೆ.