ಪಾಕ್ ಕಲಾವಿದರ ವಿವಾದ: ಸಲ್ಲುಗೆ ಪಾಠ ಕಲಿಸಬೇಕಿದೆ ಎಂದ ಶಿವಸೇನೆ

ಶನಿವಾರ, 1 ಅಕ್ಟೋಬರ್ 2016 (14:51 IST)
ಪಾಕಿಸ್ತಾನದ ಕಲಾವಿದರು ಉಗ್ರರಲ್ಲ ಎಂದು ಹೇಳಿಕೆ ನೀಡಿದ್ದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ವಿರುದ್ಧ ಗರಂ ಆಗಿರುವ ಶಿವಸೇನೆ ನಟನಿಗೆ ಪಾಠ ಹೇಳಿಕೊಡಬೇಕಿದೆ ಎಂದು ಹೇಳಿದೆ. 
ಸಲ್ಮಾನ್ ಅವರಿಗೆ ಪಾಠ ಹೇಳಿಕೊಡಬೇಕಿದೆ. ಪಾಕ್ ಕಲಾವಿದರ ಬಗ್ಗೆ ಅತಿಯಾದ ಪ್ರೀತಿಯನ್ನು ಹೊಂದಿರುವ ಅವರು ಪಾಕಿಸ್ತಾನಕ್ಕೆ ವಲಸೆ ಹೋಗಬೇಕು ಎಂದು ಶಿವಸೇನೆ ವಕ್ತಾರ ಮನೀಶಾ ಕಯಾಂಡೆ ಕಿಡಿಕಾರಿದ್ದಾರೆ. 
 
ಭಾರತದ ಮೋಶನ್ ಪಿಕ್ಚರ್ಸ್ ಪ್ರೊಡ್ಯೂಸರ್ಸ್ ಅಸೋಸಿಯೇಶನ್ ನಿರ್ಣಯವೊಂದನ್ನು ಹೊರಡಿಸಿ, ಪಾಕಿಸ್ತಾನದ ಕಲಾವಿದರಿಗೆ, ತಂತ್ರಜ್ಞರಿಗೆ ನಿಷೇಧ ಹೇರಿತ್ತು.
 
ಇದಕ್ಕೆ ಪ್ರತಿಕ್ರಿಸಿದ್ದ ಸಲ್ಮಾನ್, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನದ ಕಲಾವಿದರು ಭಾರತ ಸರಕಾರದ ಅನುಮತಿ ಪಡೆದಿದ್ದಾರೆ. ಅವರು ಉಗ್ರರಲ್ಲ. ಆದ್ದರಿಂದ, ಅವರಿಗೆ ಉದ್ಯೋಗ ನಿರಾಕರಿಸಲು ಯಾವುದೇ ಕಾರಣಗಳಿಲ್ಲ. ಉಭಯ ದೇಶಗಳ ಮಧ್ಯೆ ಶಾಂತಿಯುತ ವಾತಾವರಣ ನಿರ್ಮಿಸುವ ಅಗತ್ಯವಿದೆ ಎಂದಿದ್ದರು. 
 
ಪಾಕಿಸ್ತಾನದ ಕಲಾವಿದರು ಭಾರತ ಬಿಟ್ಟು ಹೊರಡಬೇಕು ಎಂದು ಹೇಳಿದವರಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮೊದಲನೆಯದು. ಹೆಚ್ಚುತ್ತಿದ್ದಂತೆ ಮೋಶನ್ ಪಿಕ್ಚರ್ಸ್ ಪ್ರೊಡ್ಯೂಸರ್ಸ್ ಅಸೋಸಿಯೇಶನ್ ಪಾಕ್ ಕಲಾವಿದರ ಮೇಲೆ ನಿಷೇಧ ಹೇರಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ