ಆಧಾರ್ ಲಿಂಕ್ ಮಾಡದಿದ್ದರೂ ಪ್ಯಾನ್ ಕಾರ್ಡ್ ಅಮಾನ್ಯವಾಗಲ್ಲ

ಶುಕ್ರವಾರ, 30 ಜೂನ್ 2017 (17:43 IST)
ಆಧಾರ್ ಲಿಂಕ್ ಮಾಡದಿದ್ದರೆ ಪಾನ್ ಕಾರ್ಡ್ ಅಮಾನ್ಯಗೊಳ್ಳುತ್ತಾ..? ಹಲವು ದಿನಗಳಿಂದ ಸಾರ್ವಜನಿಕರಲ್ಲಿ ಹರಿದಾಡುತ್ತಿರುವ ಗೊಂದಲಕ್ಕೆ ಸ್ವತಃ ನೇರ ತೆರಿಗೆಯ ಕೇಂದ್ರ ಮಂಡಳಿ ತೆರೆ ಎಳೆದಿದೆ. ಜೂನ್ 30ರೊಳಗೆ ಅಂದರೆ ಇಂದು ಪಾನ್ ಕಾರ್ಡ್`ಗೆ ಆಧಾರ್ ಲಿಂಕ್ ಮಾಡದಿದ್ದರೂ ಪಾನ್ ಕಾರ್ಡ್ ಅಮಾನ್ಯ ಮಾಡುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ. ಆದರೆ, ಮುಂದಿನ ದಿನಗಳಲ್ಲಿ ಆಧಾರ್ ಲಿಂಕ್ ಮಾಡಲು ಡೆಡ್ ಲೈನ್ ವಿಧಿಸಲಾಗುತ್ತೆ ಎಂದು ಸಂಸ್ಥೆ ತಿಳಿಸಿದೆ.

ಜನರು ಯಾವುದೇ ರೀತಿಯಿಂದ ಆತಂಕಗೊಳ್ಳುವ ಅಗತ್ಯವಿಲ್ಲ. ಜೂನ್ 30ರ ಬಳಿಕ ಪ್ಯಾನ್ ಕಾರ್ಡ್ ಅಮಾನ್ಯಗೊಳ್ಳುವುದಿಲ್ಲ ಎಂದು ಸಿಡಿಬಿಟಿ ಛೇರ್ಮನ್ ಸುಶೀಲ್ ಚಂಸ್ರ ಹೇಳಿರುವುದಾಗಿ ವರದಿಯಾಗಿದೆ. ಜೂನ್ 30ರೊಳಗೆ ಆಧಾರ್ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ಅಮಾನ್ಯಗೊಳ್ಳಲಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಈ ಹೇಳಿಕೆ ಹೊರಬಿದ್ದಿದೆ. ತೆರಿಗೆ ಇಲಾಖೆ ಅಧುಸೂಚನೆಯನ್ನ ತಪ್ಪಾಗಿ ಅರ್ಥೈಸಲಾಗಿದ್ದು, ಪಾನ್ ಕಾರ್ಡ್ ಅಮಾನ್ಯದ ಸುದ್ದಿ ಹರಡಿದೆ ಎಂದು ಮಂಡಳಿ ತಿಳಿಸಿದೆ.

ಆದರೆ, ಮುಂದೊಂದು ದಿನ ಆಧಾರ್ ಲಿಂಕ್ ಕಡ್ಡಾಯಗೊಳಿಸಿ ಡೆಡ್ ಲೈನ್ ವಿಧಿಸಲಾಗುತ್ತೆ. ಅದನ್ನ ಮೀರಿದರೆ ಖಂಡಿತಾ ಪಾನ್ ಕಾರ್ಡ್ ಅಮಾನ್ಯಗೊಳ್ಳಲಿದೆ ಎಂದು ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ