ಪನಾಮಾ ಪೇಪರ್ಸ್: ತೆರಿಗೆ ವಂಚಕರ ವಿರುದ್ಧ ಕಠಿಣ ಕ್ರಮ ಎಂದ ಸಚಿವ ಅರುಣ್ ಜೇಟ್ಲಿ

ಸೋಮವಾರ, 4 ಏಪ್ರಿಲ್ 2016 (20:55 IST)
ಪನಾಮಾ ಪೇಪರ್ಸ್ ಬಹಿರಂಗಪಡಿಸಿದ ತೆರಿಗೆ ವಂಚಕರ ವಿರುದ್ಧ ಕೇಂದ್ರ ಸರಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 
 
ವಿದೇಶಗಳಲ್ಲಿ ಕಾನೂನುಬಾಹಿರವಾಗಿ ಖಾತೆಗಳನ್ನು  ಹೊಂದಿರುವವರ ವಿವರಗಳನ್ನು ಪಡೆಯಲು ಬಹು ತಂಡಗಳನ್ನು ರಚಿಸಲಾಗುವುದು. ದೇಶದ ಚಿತ್ರನಟರು ಮತ್ತು ಕೈಗಾರಿಕೋದ್ಯಮಿಗಳು ಪಟ್ಟಿಯಲ್ಲಿರುವುದು ಬಹಿರಂಗವಾಗಿದೆ ಎಂದು ತಿಳಿಸಿದ್ದಾರೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಚರ್ಚಿಸಿದ್ದು ಅವರ ಸಲಹೆ ಮೇರೆಗೆ ಸಿಬಿಡಿಟಿ, ಆರ್‌ಬಿಐ ಮತ್ತು ಎಫ್ಐಯು ತಂಡಗಳನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
 
ಕೇಂದ್ರ ಸರಕಾರ ರಚಿಸಿದ ತಂಡಗಳು ಅನಧಿಕೃತ ಕಾನೂನುಬಾಹಿರವಾಗಿ ಹೊಂದಿದ ಈ ಖಾತೆಗಳ ಮೇಲೆ ನಿಗಾವಹಿಸಲಿವೆ. ಇಂತಹ ಖಾತೆದಾರರ ವಿವರಗಳು ಲಭ್ಯವಾದಲ್ಲಿ ಶಿಕ್ಷೆ ಖಚಿತ ಎಂದು ಗುಡುಗಿದ್ದಾರೆ. 
 
ಬಾಲಿವುಡ್ ನಟ ಅಮಿತಾಬ್ ಬಚ್ಚನ್, ನಟಿ ಐಶ್ವರ್ಯ ರೈ ಸೇರಿದಂತೆ ಹಲವಾರು ಗಣ್ಯಾತಿಗಣ್ಯರು ಕಪ್ಪು ಹಣವನ್ನು ವಿದೇಶಿ ಬ್ಯಾಂಕ್‌ಗಳಲ್ಲಿ ಜಮಾ ಮಾಡಿರುವುದು ಬಹಿರಂಗವಾಗಿದೆ.

ವೆಬ್ದುನಿಯಾವನ್ನು ಓದಿ