ಜಮ್ಮು ಮತ್ತು ಕಾಶ್ಮೀರ: ವಿಧಾನಸಭೆಯಲ್ಲಿ ಮಾರಾಮಾರಿ

ಸೋಮವಾರ, 5 ಅಕ್ಟೋಬರ್ 2015 (11:54 IST)
ಕಣಿವೆ ನಾಡು ಜಮ್ಮು ಕಾಶ್ಮೀರದ ವಿಧಾನಸಭೆಯಲ್ಲಿ ಇಂದು ಕೋಲಾಹಲ ನಡೆಯುತ್ತಿದ್ದು, ಗೋಮಾಂಸ ಮಾರಾಟ ನಿಷೇಧ ಮತ್ತು ಪ್ರವಾಹ ಸಂತ್ರಸ್ತರ ನಿಧಿ ದುರ್ಬಳಕೆ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಸದಸ್ಯರು ಗದ್ದಲವನ್ನು ನಿರ್ಮಿಸಿದ್ದಾರೆ.
 
ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದು, ಆಡಳಿತ ಪಕ್ಷ ಇದನ್ನು ಪ್ರಬಲವಾಗಿ ಆಕ್ಷೇಪಿಸಿದೆ. ಪರಿಣಾಮ ವಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ಮಾರಾಮಾರಿಯೂ ಸಹ ನಡೆದಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಮಾರ್ಷಲ್‌ಗಳು ಪ್ರಯತ್ನಿಸುತ್ತಿದ್ದಾರಾದರೂ ತಳ್ಳಾಟ, ನೂಕಾಟ ಮುಂದುವರೆದಿದೆ. 
 
ರಾಜ್ಯದಲ್ಲಿ ಗೋಮಾಂಸ ಮಾರಾಟ ನಿಷೇಧಕ್ಕೆ ಸಂಬಂಧಿಸಿದಂತೆ ಒಂದು ಬಣ ಒತ್ತಾಯಿಸಿದರೆ, ಇನ್ನೊಂದು ಬಣ ಅದನ್ನು ವಿರೋಧಿಸುತ್ತಿದೆ. ಹೈಕೋರ್ಟ್‌ನ ಎರಡು ಪೀಠಗಳು ಸಹ ಈ ಕುರಿತಂತೆ ಬೇರೆ ಬೇರೆ ತೀರ್ಪು ನೀಡಿವೆ. ಹೀಗಾಗಿ ಪ್ರಕರಣ ಸುಪ್ರೀಂ ಮೆಟ್ಟಿಲೇರಿದೆ. ಈಗ ಎಲ್ಲರ ದೃಷ್ಟಿ ಸುಪ್ರೀಂ ಈ ವಿಷಯದಲ್ಲಿ ಏನು ತೀರ್ಪು ನೀಡಲಿದೆ ಎಂಬುದರ ಮೇಲೆ ನೆಟ್ಟಿದೆ. 

ವೆಬ್ದುನಿಯಾವನ್ನು ಓದಿ