ನನ್ನ ವಿರುದ್ಧಧ ಹಗರಣಗಳು ಸಾಬೀತಾದ್ರೆ ರಾಜಕೀಯ ನಿವೃತ್ತಿ: ಪಂಕಜಾ ಮುಂಡೆ ಘೋಷಣೆ

ಬುಧವಾರ, 1 ಜುಲೈ 2015 (21:09 IST)
ಎರಡು ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನುವ ವಿಪಕ್ಷಗಳ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಪಂಕಜಾ ಮುಂಡೆ, ಒಂದು ವೇಳೆ ಆರೋಪಗಳಲ್ಲಿ ತಪ್ಪಿತಸ್ಥೆ ಎಂದು ಸಾಬೀತಾದಲ್ಲಿ ರಾಜಕೀಯದಿಂದಲೇ ನಿವೃತ್ತಿ ಘೋಷಿಸುತ್ತೇನೆ ಎಂದು ಹೇಳಿದ್ದಾರೆ.
 
ನಾನು ಯಾವುದೇ ರೀತಿಯ ಅವ್ಯವಹಾರಗಳಲ್ಲಿ ಭಾಗಿಯಾಗಿಲ್ಲ. ನನ್ನ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರುವಾಗಿವೆ. ಸರಕಾರ ಎರಡು ಯೋಜನೆಗಳ ವಿವರಗಳನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಒಪ್ಪಿಸಲು ಸಿದ್ದಳಿದ್ದೇನೆ. ಒಂದು ವೇಳೆ ತಪ್ಪು ಮಾಡಿದ್ದೇನೆ ಎಂದು ವರದಿ ಬಂದಲ್ಲಿ ರಾಜಕೀಯವನ್ನೇ ತೊರೆಯುತ್ತೇನೆ ಎಂದು ವಿಪಕ್ಷಗಳಿಗೆ ಸವಾಲ್ ಹಾಕಿದ್ದಾರೆ.
 
ಅಂಗನವಾಡಿ ಶಾಲೆಯ ಮಕ್ಕಳಿಗಾಗಿ ಸಚಿವೆ ಮುಂಡೆ, ಇ-ಟೆಂಡರ್ ಕರೆಯದೆ ಸುಮಾರು 206 ಕೋಟಿ ರೂಪಾಯಿಗಳ ಗುತ್ತಿಗೆ ನೀಡಿರುವ ಬಗ್ಗೆ ವಿಪಕ್ಷಗಳು ಕೋಲಾಹಲವೆಬ್ಬಿಸಿದ್ದು, ಇದರಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿವೆ. 
 
ಹಗರಣ ಎಂದು ಬಳಸುವ ಶಬ್ದ ತುಂಬಾ ಗಂಭೀರವಾದ ಸಂಗತಿ. ವಿಪಕ್ಷಗಳು ಪ್ರತಿಯೊಂದು ವಿಷಯವನ್ನು ಹಗರಣವಾಗಿ ಬಿಂಬಿಸುತ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ. 
 
ಇ-ಟೆಂಡರಿಂಗ್‌ನಲ್ಲಿ ಕಡಿಮೆ ಮೊತ್ತದ ಬಿಡ್ ಮಾಡಿದ್ದ ಅವರ್ಹಗೊಂಡ ಕಂಪೆನಿಗೆ ಡ್ಯಾಮ್ ನಿರ್ಮಾಣದ ಗುತ್ತಿಗೆ ನೀಡಿರುವುದು ಸರಿಯೇ ಎಂದು ಕಾಂಗ್ರೆಸ್, ಅಧಿಕಾರರೂಡ ಬಿಜೆಪಿ ಸರಕಾರದ ವಿರುದ್ಧ ಕಿಡಿಕಾರಿದೆ. 
 

ವೆಬ್ದುನಿಯಾವನ್ನು ಓದಿ