ಮಹಾರಾಷ್ಟ್ರ: ಸಚಿವ ಸಂಪುಟಕ್ಕೆ ಗೈರುಹಾಜರಾದವರಲ್ಲಿ ಪಂಕಜಾ ಮುಂಡೆಗೆ ಅಗ್ರಸ್ಥಾನ

ಶನಿವಾರ, 1 ಆಗಸ್ಟ್ 2015 (17:23 IST)
ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಪಂಕಜಾ ಮುಂಡೆ, ಸಚಿವ ಸಂಪುಟ ಸಭೆಗೆ ಗೈರುಹಾಜರಾದ ಸಚಿವರಲ್ಲಿ ಅಗ್ರಸ್ಥಾನ ಪಡೆದಿರುವುದು ಆರ್‌ಟಿಐ ಮಾಹಿತಿಯಿಂದ ಬಹಿರಂಗವಾಗಿದೆ. 
 
ಸಚಿವ ಸಂಪುಟ ಸಭೆಗಳಿಗೆ ಅತಿ ಹೆಚ್ಚು ಗೈರುಹಾಜರಾದ ಇತರರೆಂದರೆ ಲೋಕೋಪಯೋಗಿ ಸಚಿವ ಎಕನಾಥ್ ಶಿಂಧೆ, ಆರೋಗ್ಯ ಸಚಿವ ದೀಪಕ್ ಸಾವಂತ್ ಙಣಕಾಸು ಸಚಿವ ಸುಧೀರ್ ಮುಂಗಾಂತಿವಾರ್ ಮತ್ತು ಸಮಾಜ ಕಲ್ಯಾಣ ಖಾತೆ ಸಚಿವ ರಾಜಕುಮಾರ್ ಬಾಡೋಲೆ ಸ್ಥಾನ ಪಡೆದಿದ್ದಾರೆ.  
 
ಆರ್‌ಟಿಐ ಕಾರ್ಯಕರ್ತ ಅನಿಲ್ ಗಲಗಲಿ ಮುಖ್ಯ ಕಾರ್ಯದರ್ಶಿಗಳ ಕಚೇರಿಯಿಂದ ಪಡೆದ ಮಾಹಿತಿಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಜಲ ಸಂಪನ್ಮೂಲ ಖಾತೆ ಸಚಿವ ಬಬನ್‌ರಾವ್ ಲೋನಿಕರ್ ಹೊರತುಪಡಿಸಿದಲ್ಲಿ ಇತರ ಸಚಿವರು ಶೇ.100 ರಷ್ಟು ಹಾಜರಾತಿ ಹೊಂದಿದ್ದಾರೆ ಎಂದು ಆರ್‌ಟಿಐಯಿಂದ ಬಹಿರಂಗವಾಗಿದೆ.
 
ರಾಜ್ಯ ಸರಕಾರ, ಒಟ್ಟು ನಡೆಸಿದ ಸಚಿವ ಸಂಪುಟ ಸಭೆಗಳ ಸಂಖ್ಯೆ. ಸಚಿವರ ಹಾಜರಾತಿ ಕುರಿತಂತೆ ಮಾಹಿತಿ ನೀಡಿ ಆರ್‌ಟಿಐ ಕಾರ್ಯಕರ್ತ ಗಲಗಲಿ, ಮುಖ್ಯ ಕಾರ್ಯದರ್ಶಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. 
 
ಮಹಾರಾಷ್ಟ್ರ ಸರಕಾರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಎನ್‌ಬಿ ಖೇಡ್ಕರ್, ಆರ್‌ಟಿಐ ಕಾರ್ಯಕರ್ತ ಗಲಗಲಿ ಅರ್ಜಿಗೆ ಉತ್ತರಿಸಿ ಕಳೆದ 2014ರ ಡಿಸೆಂಬರ್ 11 ರಿಂದ ಜೂನ್ 23 2015ರ ವರೆಗೆ ಒಟ್ಟು 28 ಬಾರಿ ಸಚಿವ ಸಂಪುಟ ಸಭೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.  
 

ವೆಬ್ದುನಿಯಾವನ್ನು ಓದಿ