ಪಳನಿ ವಿಶ್ವಾಸಮತಯಾಚನೆ : ತಲೆ ಎಣಿಕೆ ಮತದಾನ

ಶನಿವಾರ, 18 ಫೆಬ್ರವರಿ 2017 (12:11 IST)
ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ನಡೆಯುತ್ತಿದ್ದು ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚುತ್ತಿದೆ. ಮತದಾನದ ವೇಳೆ ಹೈ ಡ್ರಾಮಾ ನಡೆಯುತ್ತಿದ್ದು ಸ್ಪೀಕರ್ ನಡೆಗೆ ವಿಪಕ್ಷಗಳು ಆಕ್ಷೇಪ ವ್ಯಕ್ತ ಪಡಿಸಿವೆ.
ವಿಶ್ವಾಸಮತಯಾಚನೆ ಮುಂದೂಡುವಂತೆ ವಿರೋಧ ಪಕ್ಷದ ನಾಯಕ ಸ್ಟಾಲಿನ್ ಆಗ್ರಹಿಸಿದರು. ಜತೆಗೆ ಪನ್ನೀರ್ ಸೆಲ್ವಂ ಅವರಿಗೂ ಮಾತನಾಡಲು ಅವಕಾಶ ನೀಡುವಂತೆ ಸ್ಪೀಕರ್ ಧನಪಾಲ್ ಅವರಿಗೆ ಒತ್ತಾಯಿಸಿದರು. ಆದರೆ ಡಿಎಂಕೆ ಮನವಿಯನ್ನು ತರಿಸ್ಕರಿಸಿದ ಸ್ಪೀಕರ್ ತಲೆ ಎಣಿಕೆ ಮತದಾನಕ್ಕೆ ಸೂಚನೆ ನೀಡಿದರು. ರೆಸಾರ್ಟ್ ವಿಷಯ ಪ್ರಸ್ತಾಪಕ್ಕೂ ಅವಕಾಶ ನೀಡದ ಸ್ಪೀಕರ್ ಧ್ವನಿ ಮತದಾನಕ್ಕೆ ನನ್ನ ನಿರ್ಧಾರವೇ ಅಂತಿಮ ಎಂದರು.
 
ಮಾಧ್ಯಮಗಳನ್ನು ಹೊರಗಿಟ್ಟು ವಿಶ್ವಾಸಮತಯಾಚನೆ ಮಾಡಲಾಗುತ್ತಿದ್ದು ಮೊದಲ ಹಂತದಲ್ಲಿ ಶಾಸಕರು ಪಳನಿ ಪರ 38 ಮತ ಚಲಾಯಿಸಿದ್ದಾರೆ.
 
ರಹಸ್ಯ ಮತದಾನಕ್ಕೆ ಸ್ಪೀಕರ್ ಒಪ್ಪಿಗೆ ನೀಡದಿರುವುದು ಪನ್ನೀರ್ ಸೆಲ್ವಂ ಬಣಕ್ಕೆ ಹಿನ್ನಡೆ ಎಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ