ಜಯಲಲಿತಾ ಸಮಾಧಿಯಲ್ಲಿ ಪನ್ನೀರದೀಪ

ಬುಧವಾರ, 15 ಫೆಬ್ರವರಿ 2017 (09:47 IST)
ತಮಿಳುನಾಡಿನಲ್ಲಾಗುತ್ತಿರುವ ಕ್ಷಿಪ್ರ ರಾಜಕೀಯ ಚಟುವಟಿಕೆಗಳ ಭಾಗವಾಗಿ  ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಸೋದರ ಸೊಸೆ  ದೀಪಾ ಜಯಕುಮಾರ್ ನಿನ್ನೆ  ಪಿ. ಪನ್ನೀರ್ ಸೆಲ್ವಂ ಬಣಕ್ಕೆ ಸೇರ್ಪಡೆಯಾದರು. ಬಳಿಕ ಇಬ್ಬರು ಸೇರಿ ಮರೀನಾ ಬೀಚ್‌ಗೆ ತೆರಳಿ ಅಮ್ಮನ ಸಮಾಧಿಗೆ ನಮಸ್ಕರಿಸಿದರು. 

ಜಯಾ ಸಾವಿನ ಹಿಂದೆಯೇ ಶಶಿಕಲಾ ನಟರಾಜನ್ ವಿರುದ್ಧ ತೊಡೆ ತಟ್ಟಿದ್ದ ದೀಪಾ ಜಯಕುಮಾರ್ ತಾವು ರಾಜಕೀಯ ಪ್ರವೇಶಿಸುವುದಾಗಿ ಘೋಷಿಸಿದ್ದು. ಅಮ್ಮನ ಜನ್ಮದಿನವಾದ ಫೆಬ್ರವರಿ 24 ರಂದು ಹೊಸ ಪಕ್ಷ ಕಟ್ಟುತ್ತೆನೋ ಅಥವಾ ಎಐಡಿಎಂಕೆ ಸೇರುತ್ತೇನೋ ಎಂದು ಸ್ಪಷ್ಟ ಪಡಿಸುವುದಾಗಿ ಹೇಳಿದ್ದಾರೆ.
 
ಆದರೆ ನಿನ್ನೆ ಅಮ್ಮ ಸಮಾಧಿ ಬಳಿ ಮಾತನಾಡಿದ ಅವರು ಇಂದಿನಿಂದ ನನ್ನ ರಾಜಕೀಯ ಜೀವನ ಪ್ರಾರಂಭವಾಗುತ್ತಿದೆ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ