''ಪಳನಿ'' ವಿಶ್ವಾಸಮತಕ್ಕೆ ''ಪನ್ನೀರ್'' ಆಕ್ರೋಶ

ಶನಿವಾರ, 18 ಫೆಬ್ರವರಿ 2017 (15:52 IST)
ತಮಿಳುನಾಡು ವಿಧಾನಸಭೆಯಲ್ಲಿ ವಿಪಕ್ಷಗಳನ್ನು ಹೊರಗಿಟ್ಟು ವಿಶ್ವಾಸಮತಯಾಚನೆಗೆ ಅವಕಾಶ ನೀಡಲಾಯಿತು ಎಂದು  ಮಾಜಿ ಸಿಎಂ ಪನ್ನೀರ್ ಸೆಲ್ವಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಶಾಸಕರನ್ನು ರೆಸಾರ್ಟ್‌ನಲ್ಲಿ ಅಡಗಿಸಿಟ್ಟು ಅವರನ್ನು ಹೆದರಿಸಿ, ಬೆದರಿಸಿ ಮುಖ್ಯಮಂತ್ರಿ ಪಳನಿಸ್ವಾಮಿ ಪರ ಮತ ನೀಡುವಂತೆ ಒತ್ತಾಯಿಸಲಾಗಿದೆ. ಸ್ಪೀಕರ್ ರಹಸ್ಯ ಮತದಾನಕ್ಕೆ ಅವಕಾಶ ಕೊಡುವಂತೆ ಕೋರಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
 
ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಸಭಾಪತಿ ಧನಪಾಲ್, ಚರ್ಚೆಗೆ ಕೂಡಾ ಅವಕಾಶ ನೀಡಲಿಲ್ಲ. ಕೇವಲ ಧ್ವನಿಮತದಿಂದ ಮಾತ್ರ ವಿಶ್ವಾಸಮತ ಯಾಚನೆಗೆ ಅವಕಾಶ ಕೊಡಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಮುಂಬರುವ ದಿನಗಳಲ್ಲಿ ಪ್ರತಿಯೊಂದು ಹಳ್ಳಿಯಿಂದ ನಗರಗಳವರೆಗೆ ಧರ್ಮಯುದ್ಧ ಆರಂಭವಾಗಲಿದೆ. ಜನತೆಯ ಎದುರು ನಮ್ಮ ಸಂಕಷ್ಟವನ್ನು ತೋಡಿಕೊಳ್ಳುತ್ತೇವೆ ಎಂದು ಮಾಜಿ ಸಿಎಂ ಪನ್ನೀರ್ ಸೆಲ್ವಂ ಘೋಷಿಸಿದರು. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ