ಅಪ್ರಾಪ್ತೆ ಮೇಲೆ ಅತ್ಯಾಚಾರ: ಮೇಘಾಲಯ ಶಾಸಕನ ಬಂಧನ

ಶನಿವಾರ, 7 ಜನವರಿ 2017 (12:00 IST)
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೇಘಾಲಯದ ಪಕ್ಷೇತರ ಶಾಸಕ ಜ್ಯೂಲಿಯಸ್.ಕೆ.ಡ್ರೊಪಾಂಗ್‌ನನ್ನು ಗುವಾಹತಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
14 ವರ್ಷದ ಬಾಲಕಿಯ ಮೇಲೆ ಜ್ಯೂಲಿಯಸ್.ಕೆ.ಡ್ರೊಪಾಂಗ್‌ ಅತ್ಯಾಚಾರ ಎಸಗಿದ್ದಾಗಿ ಬಾಲಕಿಯ ಕುಟುಂಬಸ್ಥರು ಡಿಸೆಂಬರ್ 16 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 
 
ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರಿಸಿಕೊಂಡಿದ್ದ ಶಾಸಕನನ್ನು ಕುರಿತು ಮೇಘಾಲಯ ಪೊಲೀಸರು ಅಸ್ಸಾಂ ಪೊಲೀಸರಿಗೆ ಮಾಹಿತಿ ನೀಡಿದ್ದರು. 
 
ಇಂದು ಅಸ್ಸಾಂನ ಕ್ರೈಂ ಬ್ರಾಂಚ್ ಪೊಲೀಸರು ಆರೋಪಿ ಜ್ಯೂಲಿಯಸ್.ಕೆ.ಡ್ರೊಪಾಂಗ್‌‌ನನ್ನು ಬಂಧಿಸಿ ಮೇಘಾಲಯ ಪೊಲೀಸರಿಗೆ ಒಪ್ಪಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ