ಪೋಷಕರು ತಮ್ಮ ಆಯ್ಕೆಗಳನ್ನು ಮಕ್ಕಳ ಮೇಲೆ ಹೇರಬಾರದು: ಪ್ರಧಾನಿ

ಶುಕ್ರವಾರ, 4 ಸೆಪ್ಟಂಬರ್ 2015 (15:38 IST)
ಶಿಕ್ಷಕರ ದಿನಾಚರಣೆ ನಿಮಿತ್ಯವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ, ಪೋಷಕರು ತಮ್ಮ ಆಯ್ಕೆಯನ್ನು ಮಕ್ಕಳಿಗೆ ಹೇರಬಾರದು ಎಂದು ಸಲಹೆ ನೀಡಿದರು. 
 
ದೇಶವನ್ನು ಸೂಪರ್ ಪವರ್ ದೇಶವನ್ನಾಗಿಸಲು ಪ್ರಾಮಾಣಿಕ ಜನರು ರಾಜಕೀಯ ಪ್ರವೇಶಿಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.
 
ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ವಿದ್ಯಾರ್ಥಿಗಳ ಹಲವಾರು ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿದ ಪ್ರಧಾನಿ ಮೋದಿ, ಶಾಲೆಗಳಲ್ಲಿ ನಡತೆ ಪ್ರಮಾಣ ಪತ್ರ ನೀಡುವ ಬದಲು ಯೋಗ್ಯತೆಯ ಪ್ರಮಾಣ ಪತ್ರ ನೀಡುವಂತೆ ನಿರ್ದೇಶನ ನೀಡಿದ್ದೇನೆ. ಯೋಗ್ಯತೆ ಪ್ರಮಾಣ ಪತ್ರದಿಂದ ವಿದ್ಯಾರ್ಥಿಯ ವೈಯಕ್ತಿತ್ವದ ಪರಿಚಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
 
ದೆಹಲಿಯ 60 ಶಿಕ್ಷಕರು ಮತ್ತು 800 ವಿದ್ಯಾರ್ಥಿಗಳೊಂದಿಗೆ ಮಾನೇಕ್ ಶಾ ಆಡಿಟೋರಿಯಂನಲ್ಲಿ ಪ್ರಧಾನಿ ಮೋದಿ ಸುಮಾರು 105 ನಿಮಿಷಗಳ ಕಾಲ ಸಂವಾದ ನಡೆಸಿದರು.
 

ವೆಬ್ದುನಿಯಾವನ್ನು ಓದಿ