ಗುರುದಾಸ್‌ಪುರ್ ಉಗ್ರರ ದಾಳಿಯನ್ನು ಖಂಡಿಸಿದ ಉಭಯ ಸದನಗಳು

ಗುರುವಾರ, 30 ಜುಲೈ 2015 (14:50 IST)
ಮುಂಗಾರು ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಗುರುದಾಸ್‌ಪುರ್ ಉಗ್ರರ ದಾಳಿಯಲ್ಲಿ ಹುತಾತ್ಮರಾದವರಿಗಾಗಿ ಎರಡು ನಿಮಿಷಗಳ ಕಾಲ ಮೌನ ಆಚರಿಸಲಾಯಿತು
 
ಲೋಕಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಪಂಜಾಬ್‌ನ ಗುರುದಾಸ್‌ಪುರ್ ಜಿಲ್ಲೆಯ ದೀನಾನಗರ್ ಪಟ್ಟಣದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಹೆಮ್ಮೆಯ ಪುತ್ರರರಿಗೆ ನಮನ ಸಲ್ಲಿಸಿ ಅಧಿವೇಶನವನ್ನು ನಾಳೆಗೆ ಮುಂದೂಡಲಾಯಿತು.   
 
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಗೂ ಕೂಡಾ ನಮನ ಸಲ್ಲಿಸಿದ ಸಂಸದರು ಅವರ ಗುಣಗಾನ ಮಾಡಿದರು.
 
ರಾಜ್ಯಸಭೆಯಲ್ಲಿ ಉಗ್ರರ ದಾಳಿಯನ್ನು ಖಂಡಿಸಲಾಯಿತಲ್ಲದೇ ಕರ್ತವ್ಯನಿರ್ವಹಣೆಯಲ್ಲಿ ಜೀವ ಕಳೆದುಕೊಂಡು ಹುತಾತ್ಮರಾದವರಿಗೆ ಸಂತಾಪ ಸೂಚಿಸಲಾಯಿತು. ಘಟನೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಲ್ಜಿತ್ ಸಿಂಗ್ ಸೇರಿದಂತೆ ನಾಲ್ಕು ಜನ ಭಧ್ರತಾ ಪಡೆ ಯೋಧರು, ಮೂವರು ನಾಗರಿಕರು ಸಾವನ್ನಪ್ಪಿದ್ದು 16 ಮಂದಿ ಗಾಯಗೊಂಡಿದ್ದರು. 
 
ರಾಜ್ಯಸಭೆಯ ಸಭಾಪತಿ ಹಮೀದ್ ಅನ್ಸಾರಿ ಸದನದ ಕಲಾಪ ಆರಂಭವಾಗುತ್ತಿದ್ದಂತೆ, ಪಂಜಾಬ್ ಉಗ್ರರ ದಾಳಿಯ ಘಟನೆಯನ್ನು ಸದನಕ್ಕೆ ಮಾಹಿತಿ ನೀಡಿದರು.  
 
ಹಲವು ಜೀವನಗಳನ್ನು ಪಡೆದ ಇದೊಂದು ಹೇಯ ಕೃತ್ಯ ಎಂದು ಬಣ್ಣಿಸಿದ ಅವರು, ಹುತಾತ್ಮರಾದವರ ಆತ್ಮಕ್ಕೆ ನಮನ ಸಲ್ಲಿಸಿ ಅವರ ಕುಟುಂಬಕ್ಕೆ ದುಖಃವನ್ನು ಭರಿಸುವ ಶಕ್ತಿ ಕೊಡಲಿ ಎಂದು ಕೋರಿದರು. 
 

ವೆಬ್ದುನಿಯಾವನ್ನು ಓದಿ