ಸಂಸದರಿಗೆ ಶೇ.100 ರಷ್ಟು ವೇತನ ಹೆಚ್ಚಳ, ಮಕ್ಕಳು ಮೊಮ್ಮಕ್ಕಳಿಗೂ ಸರಕಾರಿ ಸೇವೆ: ಸಂಸದೀಯ ಸಮಿತಿ ಶಿಫಾರಸ್ಸು

ಗುರುವಾರ, 2 ಜುಲೈ 2015 (16:19 IST)
ಫೈರ್‌ಬ್ರ್ಯಾಂಡ್ ಖ್ಯಾತಿಯ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ನೇತೃತ್ವದ ಸಂಸದೀಯ ಸಮಿತಿ, ಸಂಸದೀಯರ ವೇತನದಲ್ಲಿ ಶೇ.100 ರಷ್ಟು ಹೆಚ್ಚಳಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.  
 
ಸಂಸದರ ಶೇ.100 ರಷ್ಟು ವೇತನ ಹೆಚ್ಚಳದೊಂದಿಗೆ ನಿವೃತ್ತಿ ಸಂಸದರ ಪಿಂಚಣಿಯನ್ನು 20 ಸಾವಿರ ರೂಪಾಯಿಗಳಿಂದ 50 ಸಾವಿರ ರೂಪಾಯಿಗಳವರೆಗೆ ಏರಿಕೆ ಮಾಡಬೇಕು ಎಂದು ಶಿಫಾರಸ್ಸಿನಲ್ಲಿ ಉಲ್ಲೇಖಿಸಿದೆ.
 
ಸರಕಾರಿ ಉದ್ಯೋಗಿಗಳಿಗೆ ಮಾತ್ರ ಅನ್ವಯವಾಗುವ ವೇತನ ಆಯೋಗದಂತೆ ಜನಪ್ರತಿನಿಧಿಗಳ ವೇತನಕ್ಕೆ ಸಂಬಂಧಿಸಿದಂತೆ ಹೊಸತೊಂದು ವೇತನ ಆಯೋಗ ರಚಿಸಬೇಕು ಎಂದು ಯೋಗಿ ಆದಿತ್ಯನಾಥ ಸಂಸದೀಯ ಸಮಿತಿ ವರದಿಯಲ್ಲಿ ದಾಖಲಿಸಿದೆ 
 
ಆದಿತ್ಯನಾಥ್ ನೇತೃತ್ವದ ಸಮಿತಿ ಒಟ್ಟು 60 ಶಿಫಾರಸ್ಸುಗಳನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿದೆ. ಸಂಸತ್ ಕಲಾಪದಲ್ಲಿ ಭಾಗವಹಿಸುವ ಸಂಸದರಿಗೆ ದಿನಗೂಲಿಯಾಗಿ 2 ಸಾವಿರ ರೂಪಾಯಿಗಳನ್ನು ನೀಡಬೇಕು ಎಂದು ಹೇಳಿದೆ.  
 
ವರ್ಷಕ್ಕೆ 20-25 ಉಚಿತ ವಿಮಾನ ಪ್ರಯಾಣದ ಮಧ್ಯೆಯೂ ಸಂಸದರ ಜೊತೆಯಲ್ಲಿ ಪ್ರಯಾಣಿಸುವವರಿಗೆ ಎಸಿ, ಫಸ್ಟ್ ಕ್ಲಾಸ್ ಟಿಕೆಟ್‌ಗಳನ್ನು ನೀಡಬೇಕು ಎಂದು ಕೇಂದ್ರ ಸರಕಾರಕ್ಕೆ ಸಮಿತಿ ಮನವಿ ಮಾಡಿದೆ. 
 
ವರದಿಗಳ ಪ್ರಕಾರ, ಸಂಸದರು ಅವರ ಪುತ್ರರು ಹಾಗೂ ಮೊಮ್ಮಕ್ಕಳಿಗೆ ಉಚಿತ ಆರೋಗ್ಯ ಚಿಕಿತ್ಸೆ ಒದಗಿಸಬೇಕು ಎಂದು ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ನೇತೃತ್ವದ ಸಂಸದೀಯ ಸಮಿತಿ ಕೇಂದ್ರ ಸರಕಾರಕ್ಕೆ ಕಳುಹಿಸಿದ ಶಿಫಾರಸ್ಸಿನಲ್ಲಿ ಮನವಿ ಮಾಡಿದೆ. 
 

ವೆಬ್ದುನಿಯಾವನ್ನು ಓದಿ