ಸರಕಾರಕ್ಕೆ ವಂಚಿಸಿ 15 ರೂ.ಗೆ ಚದುರ ಅಡಿ ಭೂಮಿ ಪಡೆದ ಗುಜರಾತ್ ಸಿಎಂ ಪುತ್ರಿ ಪಾಲುದಾರರು

ಬುಧವಾರ, 2 ಮಾರ್ಚ್ 2016 (16:24 IST)
ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಪುತ್ರಿ ಅನಾರ್ ಪಟೇಲ್, ತಮ್ಮ ವಹಿವಾಟಿನ ಮಿತ್ರರಿಗೆ ಕಳೆದ 2010ರಲ್ಲಿ ಚದುರ ಅಡಿ ಭೂಮಿಗೆ 15 ರೂಪಾಯಿ ಮೌಲ್ಯದ ದರದಲ್ಲಿ 422 ಎಕರೆ ಭೂಮಿಯನ್ನು ಸರಕಾರ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
 
ಸರಕಾರದ ಇಲಾಖೆಯ ಮಾಹಿತಿಯ ಪ್ರಕಾರ ಭೂಮಿಯ ಮೌಲ್ಯ ಚಟುರ ಅಡಿಗೆ 180 ರೂಪಾಯಿಗಳಾಗಿವೆ. ಆದರೆ, ಶೇ.91.6 ರಷ್ಟು ರಿಯಾಯಾತಿ ನೀಡಿ ಭೂಮಿ ಮಾರಾಟ ಮಾಡಿರುವುದು ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಸರಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
  
ಮತ್ತೊಂದೆಡೆ ಗಿರ್ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಅಮ್ರೇಲಿಯಲ್ಲಿ ಅದೇ ಭೂಮಿಯ ಪಕ್ಕದಲ್ಲಿರುವ ಭೂಮಿಯನ್ನು ನೀಡುವಂತೆ ಮುರಳಿಧರ ಗೋವು ರಕ್ಷಣಾ ಸಮಿತಿ ಸರಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಸರಕಾರ 671 ರೂಪಾಯಿಗಳಿಗೆ ಚದುರ ಅಡಿಯಂತೆ ಭೂಮಿ ನೀಡುವುದಾಗಿ ಒಪ್ಪಿಕೊಂಡಿತ್ತು. ಎರಡು ಪ್ರಸ್ತಾವನೆಗಳನ್ನು ಸರಕಾರ ಒಂದೇ ದಿನ ನಡೆದ ಸಭೆಯಲ್ಲಿ ಅಂತಿಮಗೊಳಿಸಿತ್ತು.
 
ಸಿಎಂ ಪುತ್ರಿ ಅನಾರ್ ಪಟೇಲ್ ಕಂಪೆನಿಯೊಂದಿಗೆ ವಹಿವಾಟು ನಡೆಸುತ್ತಿರುವ ವೈಲ್ಡ್‌ವುಡ್ಸ್ ರಿಸಾರ್ಟ್ಸ್ ಮಾಲೀಕರಾದ ದಕ್ಷೇಶ್ ಶಾ ಮತ್ತು ಅಮೋಲ್ ಸೇಠ್ ಅವರಿಗೆ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಲು ಸರಕಾರ ಅನುಮತಿ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
 
ಆದರೆ, ಗುಜರಾತ್ ಸರಕಾರದ ಅಧಿಕಾರಿಗಳು, ವೈಲ್ಡ್‌ವುಡ್ಸ್ ಕಂಪೆನಿಗೆ ಪ್ರತಿ ಚಟುರ ಅಡಿಗೆ 180 ರೂಪಾಯಿ ದರದಲ್ಲಿ ಭೂಮಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ