ಪ್ರಾಣಿಗಳಿಗೆ ನೀಡಬೇಕಾದ ಗ್ಲುಕೋಸ್‌ನ್ನು ರೋಗಿಗೆ ನೀಡಿದ ಆಸ್ಪತ್ರೆಯ ಸಿಬ್ಬಂದಿ

ಶನಿವಾರ, 1 ಆಗಸ್ಟ್ 2015 (14:18 IST)
ಮುನ್ನೆ ಭಾಯಿ ಪೇಂಟರ್‌ವಾಲೆ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದನು. ಆತನಿಗೆ ಗ್ಲುಕೋಸ್ ಎರಿಸಿಕೊಳ್ಳುತ್ತಿರುವಾಗ ಅದರ ಮೇಲೆ ಲೇಬಲ್ ಮೇಲೆ ಪ್ರಾಣಿಗಳಿಗೆ ಮಾತ್ರ ಎಂದು ಬರೆದಿರುವುದು ನೋಡಿ ಆಘಾತಗೊಂಡ ನಂತರ ಆಸ್ಪತ್ರೆಯ ತುಂಬಾ ಗುಲ್ಲೋ ಗುಲ್ಲು ಕಂಡುಬಂದಿತು.
 
ರೈಸೆನ್ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಪ್ರಾಣಿಗಳಿಗಾಗಿ ಮೀಸಲಿರಿಸಿದ ವೈದ್ಯಕೀಯ ಔಷಧಿಗಳನ್ನು ರೋಗಿಗಳಿಗೆ ನೀಡುತ್ತಿರುವುದು ಕಂಡು ಜನತೆ ರೊಚ್ಚಿಗೆದ್ದಿದ್ದಾರೆ. 
 
ಪ್ರಾಣಿಗಳಿಗೆ ಏರಿಸುವ ಗ್ಲುಕೋಸ್ ತನಗೆ ಎರಿಸುತ್ತಿರುವುದನ್ನು ಕಂಡು ಶಾಕ್‌ಗೊಂಡು ಇತರ ರೋಗಿಗಳ ಜೊತೆಯಲ್ಲಿ ತೆರಳಿ ಆಸ್ಪತ್ರೆಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.
 
ಸಹಾಯಕ ಆಯುಕ್ತ ಉಮ್ರಾವೋ ಸಿಂಗ್ ಮಾತನಾಡಿ, ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಮುನ್ನಾಭಾಯಿಗೆ ನೀಡಲಾದ ಗ್ಲುಕೋಸ್ ಪ್ರಾಣಿಗಳಿಗೆ ನೀಡುವಂತಹದು ಎನ್ನುವುದು ಖಚಿತವಾಗಿದೆ ಎಂದು ತಿಳಿಸಿದ್ದಾರೆ.
 
ಆಸ್ಪತ್ರೆಗೆ ಇಂತಹ ಎಷ್ಟು ಗ್ಲುಕೋಸ್‌ಗಳನ್ನು ತರಲಾಗಿದೆ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ, ಘಟನೆಯಲ್ಲಿ ತಪ್ಪಿತಸ್ಥರೆಂದು ಕಂಡ ಬಂದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ