ಕಾಲಿನ ಹೆಬ್ಬೆರಳಿನಲ್ಲಿ ಪೆನ್ ಹಿಡಿದು ಪರೀಕ್ಷೆ ಬರೆದ ಬಾಲಕಿ

ಬುಧವಾರ, 8 ಮಾರ್ಚ್ 2017 (20:38 IST)

ಪಾಟ್ನಾ(ಮಾ.08): ಸಾಧಿಸುವ ಛಲವಿದ್ದರೆ ಯಾವುದೇ ಅಂಗವಿಕಲತೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಬಿಹಾರದ ಈ ಬಾಲಕಿ ಪ್ರತ್ಯಕ್ಷ ಸಾಕ್ಷಿ. ಬಿಹಾರದ ಸರಣ್ ಜಿಲ್ಲೆಯ ವಿದ್ಯಾರ್ಥಿನಿ ಅಂಕಿತಾ ಕುಮಾರಿ ಕಾಲಿನ ಹೆಬ್ಬೆರಳಲ್ಲಿ ಪೆನ್ನನ್ನ ಹಿಡಿದು 10ನೇ ತರಗತಿ ಪರೀಕ್ಷೆ ಬರೆದಿದ್ದಾಳೆ.

5ನೇ ವಯಸ್ಸಿಗೆ ಮಾರಕ ಪೋಲಿಯೋಗೆ ತುತ್ತಾಗಿ ಅಂಗವಿಕಲೆಯಾಗಿರುವ ಬಾಲಕಿಗೆ ಕೈನಲ್ಲಿ ಬರೆಯಲು ಸಾಧ್ಯವಾಗುವುದಿಲ್ಲ. ಮಾತಾಡುವುದೂ ಕಷ್ಟ. ಆದರೆ, ಈ ಎಲ್ಲ ಅಂಗವೈಕಲ್ಯ ಮೆಟ್ಟಿನಿಂತ ಬಾಲಕಿ ಅಂಕಿತಾ 10ನೇ ತರಗತಿ ಪರೀಕ್ಷೆ ಬರೆದಿದ್ದಾಳೆ.

 

ತನ್ನ ಅಜ್ಜಿಯ ಜೊತೆ ಪರೀಕ್ಷಾ ಕೇಂದ್ರಕ್ಕೆ ಬಂದ ಅಂಕಿತಾ  ಕಾರ್ಪೆಟ್ ಮೆಲೆ ಕುಳಿತು ಕಾಲಿನಲ್ಲಿ ಪೆನ್ನಿಡಿದು ಪರೀಕ್ಷೆ ಬರೆದಿದ್ದಾರೆ.

 

ಅಂಕಿತಾಳ ಛಲ ಕಂಡ ಇನ್ವಿಜಿಲೇಟರ್ ರೂಪಾ ಕುಮಾರಿ ಅಕ್ಷರಶಃ ಬೆರಗಾಗಿದ್ದಾರೆ. ಅಂಕಿತಾ ಕುಮಾರಿಗೆ ಉಜ್ವಲ ಭವಿಷ್ಯವಿದೆ ಎಂದು ಹಾರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ