ಬಿಹಾರ್: ಮದ್ಯ ನಿಷೇಧ ಆದೇಶ ರದ್ದು

ಶನಿವಾರ, 1 ಅಕ್ಟೋಬರ್ 2016 (08:46 IST)
ಬಿಹಾರ್ ಸರ್ಕಾರ ಜಾರಿಯಲ್ಲಿ ತಂದಿದ್ದ ಮದ್ಯ ನಿಷೇಧ ಆದೇಶವನ್ನು ಪಾಟ್ನಾ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದ್ದು, ರಾಜ್ಯಾದ್ಯಂತ ಮದ್ಯ ಮಾರಾಟ ನಿಷೇಧಿಸಿದ್ದ ನಿತೀಶ್ ಕುಮಾರ್ ಅವರಿಗೆ ಭಾರಿ ಹಿನ್ನಡೆಯಾಗಿದೆ.
 
ಮದ್ಯ ಮಾರಾಟ ನಿಷೇಧಕ್ಕೆ ಸವಾಲೆಸೆದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಕ್ರಮ ಕಾನೂನುಬಾಹಿರ ಎಂಬ ತೀರ್ಮಾನಕ್ಕೆ ಬಂದಿದೆ. 
 
2016ರ ಏಪ್ರಿಲ್ 1 ರಿಂದ ಸಿಎಂ ನಿತೀಶ್ ಕುಮಾರ್ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದರು. 
 
ಬಡವರು ತೀರಾ ಬಡವರು ಕೂಡಾ ಮದ್ಯ ವ್ಯಸನಿಗಳಾಗುತ್ತಿರುವುದರಿಂದ ಅವರ ಕುಟುಂಬಗಳು ಮತ್ತು ಮಕ್ಕಳ ಶಿಕ್ಷಣ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರಿಂದ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಬಿಹಾರ್ ಜನತೆಯ ಭಾವನೆಗಳನ್ನು ಗೌರವಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ನಿತೀಶ್ ಹೇಳಿದ್ದರು. 
 
ಮದ್ಯ ಮಾರಾಟ ನಿಷೇಧಿಸಿದ ಬಳಿಕ ರಾಜ್ಯದಲ್ಲಿ ಅಕ್ರಮ ಮದ್ಯಜಾಲ, ನಕಲಿ ಮದ್ಯ ಮಾರಾಟ ತಾರಕಕ್ಕೇರಿತ್ತು.
ಇತ್ತೀಚಿಗೆ ಗೋಪಾಲ್‌ಗಂಜ್‌ನಲ್ಲಿ ನಕಲಿ ಮದ್ಯ ಸೇವಿಸಿ 15ಕ್ಕೂ ಹೆಚ್ಚು ಜನರು ದುರ್ಮರಣವನ್ನಪ್ಪಿದ್ದರು.

ವೆಬ್ದುನಿಯಾವನ್ನು ಓದಿ