ಆಂಧ್ರಪ್ರದೇಶ, ತೆಲಂಗಾಣಾ ಬಿಕ್ಕಟ್ಟು ಇತ್ಯರ್ಥಕ್ಕೆ ಮೋದಿ ಮಧ್ಯಪ್ರವೇಶಿಸಲಿ:ಪವನ್ ಕಲ್ಯಾಣ್

ಸೋಮವಾರ, 6 ಜುಲೈ 2015 (21:04 IST)
ತೆಲಂಗಾಣಾ ಮತ್ತು ಆಂಧ್ರಪ್ರದೇಶದ ಸರಕಾರಗಳ ಮಧ್ಯದ ತಿಕ್ಕಾಟದಿಂದಾಗಿ ಸಾಮಾನ್ಯ ಜನತೆ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಇತ್ಯರ್ಥಗೊಳಿಸಿ ಸಹಬಾಳ್ವೆಯಿಂದ ಬದಕುವಂತೆ ತಿಳಿಹೇಳಬೇಕು ಎಂದು ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್ ಪವನ್ ಕಲ್ಯಾಣ್ ಪ್ರಧಾನಿಗೆ ಮನವಿ ಮಾಡಿದ್ದಾರೆ.
 
ತೆಲಂಗಾಣಾ ಮತ್ತು ಆಂಧ್ರಪ್ರದೇಶ ರಾಜ್ಯಗಳ ವ್ಯವಹಾರಗಳನ್ನು ನಿಯಂತ್ರಿಸುವ ಹೊಣೆ ಯುಪಿಎ ಮತ್ತು ಎನ್‌ಡಿಎ ಪಕ್ಷಗಳಿಗಿದೆ. ಒಂದು ವೇಳೆ ಸಮಸ್ಯೆಯನ್ನು ನಿರ್ಲಕ್ಷಿಸಿದ್ದೆ ಆದಲ್ಲಿ ಒಂದಲ್ಲಾ ಒಂದು ದಿನ ಉಭಯ ರಾಜ್ಯಗಳಲ್ಲಿ ನಾಗರಿಕ ಯುದ್ಧ ಆರಂಭವಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದ್ದಾರೆ. 
 
ತೆಲಂಗಾಣ ಪ್ರದೇಶವನ್ನು ಪ್ರತ್ಯೇಕ ರಾಜ್ಯವಾಗಿ ಘೋಷಿಸಿದಾಗ ಬಹುಪಾಲು ಆಂಧ್ರಪ್ರದೇಶದ ವಶಕ್ಕೆ ಹೋಗಿದೆ. ರಾಜ್ಯವನ್ನು ವಿಭಜಿಸಿರುವ ಲೆಕ್ಕಾಚಾರದಲ್ಲಿ ತಪ್ಪಾಗಿದೆ. ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಒಂದೆಡೆ ಕುಳಿತು ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.  
 
ರಾಜ್ಯಪಾಲರಿಗೆ ವಿಶೇಷ ಅಧಿಕಾರ ನೀಡುವ ಕಾಯ್ದೆ 8 ಜಾರಿ ಪ್ರಸ್ತುತ ಪರಿಸ್ಥಿತಿಯಲ್ಲಿ ತಾವು ಅದನ್ನು ವಿರೋಧಿಸುವುದಾಗಿ ತೆಲುಗು ಸೂಪರ್‌ಸ್ಟಾರ್ ಪವನ್ ಕಲ್ಯಾಣ್ ತಿಳಿಸಿದ್ದಾರೆ.  
 

ವೆಬ್ದುನಿಯಾವನ್ನು ಓದಿ