ಕಬ್ಬಿನ ಬಾಕಿ ಪಾವತಿಸದಿದ್ರೆ ಆತ್ಮಹತ್ಯೆ ಮಾಡಿಕೊಳ್ತೇವೆ: ದೇವೇಂದ್ರ ಫಡ್ನವೀಸ್‌ಗೆ ರೈತರ ಎಚ್ಚರಿಕೆ

ಗುರುವಾರ, 3 ಸೆಪ್ಟಂಬರ್ 2015 (21:57 IST)
ನನ್ನ ಕಬ್ಬಿನ ಹಣ ಪಾವತಿಸಿ ಇಲ್ಲಾಂದ್ರೆ ಆತ್ಮಹತ್ಯೆಗೆ ಶರಣಾಗ್ತೇನೆ ಎಂದು ರೈತನೊಬ್ಬ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಗೆ  ನೇರವಾಗಿ ಎಚ್ಚರಿಕೆ ನೀಡಿದ ಘಟನೆ ವರದಿಯಾಗಿದೆ.
 
ಬರಗಾಲ ಪೀಡಿತ ಮರಾಠವಾಡಾ ಪ್ರದೇಶದ ಪ್ರವಾಸ ಕೈಗೊಂಡ ಸಿಎಂ ಫಡ್ನವೀಸ್ ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ಎದ್ದು ನಿಂತ  ಮಾಧವ್ ಭಾಲೆರಾವ್ ಎನ್ನುವ ರೈತ ಆರು ತಿಂಗಳುಗಳ ಹಿಂದೆ ಕಬ್ಬನ್ನು ಸಚಿವೆ ಪಂಕಜಾ ಮುಂಡೆ ಮಾಲೀಕತ್ವದ ಸಕ್ಕರೆ ಕಾರ್ಖಾನೆಗೆ ಸಾಗಿಸಿದ್ದೇನೆ. ಆದರೆ, ಇಲ್ಲಿಯವರೆಗೂ ಹಣ ಪಾವತಿಯಾಗಿಲ್ಲ ಎಂದು ಅಳಲನ್ನು ತೋಡಿಕೊಂಡರು.     
 
ಸಕ್ಕರೆ ಕಾರ್ಖಾನೆಯ ವಿಳಂಬ ನೀತಿಯ ಬಗ್ಗೆ ಯಾರೊಬ್ಬ ಅಧಿಕಾರಿಯೂ ಮಾತನಾಡಲು ಸಿದ್ದರಿಲ್ಲ, ಆರು ತಿಂಗಳುಗಳಿಂದ ರೈತರ ಬಾಕಿಯನ್ನು ಕಾರ್ಖಾನೆ ಉಳಿಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
 
ರೈತರ ಆಕ್ರೋಶಗೊಂಡ ಮುಖ್ಯಮಂತ್ರಿ ಫಡ್ನವೀಸ್, ಶೀಘ್ರದಲ್ಲಿ ಹಣ ಪಾವತಿಸುವಂತೆ ಸಕ್ಕರೆ ಕಾರ್ಖಾನೆ ಅಡಳಿತ ಮಂಡಳಿಗೆ ತಾಕೀತು ಮಾಡುವುದಾಗಿ ಭರವಸೆ ನೀಡಿದರು.
 
ಸುದ್ದಿಗಾರರು ರೈತನ ಆರೋಪದ ಬಗ್ಗೆ ಸಚಿವೆ ಪಂಕಜಾ ಮುಂಡೆಯವರನ್ನು ಪ್ರಶ್ನಿಸಿದಾಗ, ಭಾಲೆರಾವ್ ಎನ್ನುವ ರೈತ ಕಾರ್ಖಾನೆಗೆ ಕಬ್ಬು ಸಾಗಿಸಿದ್ದಾನೆಯೇ ಇಲ್ಲವೋ ಎನ್ನುವುದು ಖಚಿತವಾಗಿಲ್ಲ. ಶೇ.50 ರಷ್ಟು ಕಬ್ಬಿನ ಬಾಕಿ ನೆನೆಗುದಿಗೆ ಬಿದ್ದಿದ್ದು ಒಂದೆರಡು ತಿಂಗಳಲ್ಲಿ ಪಾವತಿಸುವುದಾಗಿ ಭರವಸೆ ನೀಡಿದರು.

ವೆಬ್ದುನಿಯಾವನ್ನು ಓದಿ