ಜಮ್ಮು ಕಾಶ್ಮಿರದ ಜನತೆ ಭಾರತದ ಪರವಾಗಿದ್ದಾರೆ: ಬಿಜೆಪಿ

ಸೋಮವಾರ, 6 ಜುಲೈ 2015 (15:10 IST)
ಜಮ್ಮು ಕಾಶ್ಮಿರದ ಜನತೆ ತಾವು ಭಾರತದ ಅವಿಭಾಜ್ಯ ಅಂಗವಾಗಿದ್ದೇವೆ ಎಂದು ಭಾವಿಸುತ್ತಾರೆ. ಕೇಂದ್ರ ಸರಕಾರ ರಾಜ್ಯದ ಅಭಿವೃದ್ಧಿಗಾಗಿ ಬೃಹತ್ ಯೋಜನೆಗಳನ್ನು ಜಾರಿಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ. 
 
ಜಮ್ಮು ಕಾಶ್ಮಿರ ಮತ್ತು ಲಡಾಕ್ ಪ್ರದೇಶದಲ್ಲಿರುವ ಬಹುತೇಕ ನಿವಾಸಿಗಳು ಭಾರತದ ಅವಿಭಾಜ್ಯ ಎಂದು ಭಾವಿಸಿದ್ದಾರೆ. ರಾಜಕೀಯ ನಾಯಕರು ಯಾವ ರೀತಿ ಬೇಕಾದರು ಹೇಳಲಿ. ಆದರೆ, ಇಲ್ಲಿರುವ ಜನತೆ ತಾವು ಭಾರತದ ನಾಗರಿಕರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು. 
 
ಜಮ್ಮು ಮತ್ತು ಕಾಶ್ಮಿರದ ಜನತೆ ಭಾರತೀಯ ನಾಗರಿಕರಾಗಿದ್ದರಿಂದ ಅವರಿಗೆ ಅಗತ್ಯವಾಗಿರುವುದನ್ನು ಕೇಂದ್ರ ಸರಕಾರದಿಂದ ಪಡೆಯಲು ಅಧಿಕಾರ ಹೊಂದಿದ್ದಾರೆ ಎಂದು ಶ್ಯಾಮ್ ಪ್ರಸಾದ್ ಮುಖರ್ಜಿಯವರ ಜನ್ಮದಿನಾಚರಣೆ ಸಂದರ್ಭದಲ್ಲಿ ತಿಳಿಸಿದ್ದಾರೆ.    
 
ಜಮ್ಮು ಕಾಶ್ಮಿರದ ಜನತೆಗೆ ಅಗತ್ಯವಾಗಿರುವ ಮೂಲಸೌಕರ್ಯಗಳನ್ನು ಒದಗಿಸಿ ನೆರವು ನೀಡಲು ಕೇಂದ್ರ ಸರಕಾರ ಸಿದ್ದವಾಗಿದೆ.ಜಮ್ಮು, ಲಡಾಕ್ ಮತ್ತು ಕಾಶ್ಮಿರ ಪ್ರದೇಶದ ಜನತೆಗೆ ಸರಕಾರ ಬೃಹತ್ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಬಿಜೆಪಿ ಪ್ರದಾನ ಕಾರ್ಯದರ್ಶಿ ರಾಮ್ ಮಾಧವ್ ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ